Asianet Suvarna News Asianet Suvarna News

ಕತ್ತೆಯ ಬೆನ್ನಿಗೇರಿಸಿ ಬಸ್ ಹತ್ತಿದ ಭೂಪ... ವಿಡಿಯೋ ವೈರಲ್

ವ್ಯಕ್ತಿಯೊಬ್ಬ ಕತ್ತೆಯನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಬಸ್‌ನ ಟಾಪ್‌ ಏರಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Nov 24, 2022, 1:16 PM IST

ಕತ್ತೆ ಭಾರ ಹೊರುವುದಕ್ಕೆ ಪ್ರಸಿದ್ಧಿ, ಕತ್ತೆ ಹೊಂದಿರುವ ಬಹುತೇಕರು ಕತ್ತೆಯ ಮೇಲೆ ತಮ್ಮ ಗಂಟು ಮೂಟೆಯ ಭಾರವನ್ನೆಲ್ಲಾ ಏರಿಸಿ ನಡೆದುಕೊಂಡು ಹೋಗುತ್ತಾರೆ. ಮತ್ತೆ ಕೆಲವರು ಕತ್ತೆಯ ಮೇಲೆ ತಾವೇ ಕುಳಿತುಕೊಂಡು ಹೋಗುತ್ತಾರೆ. ಆದರೆ ಯಾರು ಕತ್ತೆಯನ್ನು ಹೊತ್ತುಕೊಂಡು ಹೋಗುವುದನ್ನು ನೀವು ನೋಡಿರಲು ಸಾಧ್ಯವಿಲ್ಲ. ಆದರೆ ಪಾಕಿಸ್ತಾನದಲ್ಲಿ ಅದೂ ಸಂಭವಿಸಿದೆ. ವ್ಯಕ್ತಿಯೊಬ್ಬ ಕತ್ತೆಯನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಬಸ್‌ನ ಟಾಪ್‌ ಏರಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.