ವೋಟ್ ಬ್ಯಾಂಕ್ ರಾಜಕಾರಣಕ್ಕೆ ಉತ್ತರ ಕೊಡ್ತಾರಾ ಕೆನಡಾ ಜನ!ಎಡವಟ್ ರಾಜನಿಗೆ ಏನಂತ ಹೇಳಿದ್ರು ಸ್ನೇಹಿತರು?

ಕೆನಡಾಕ್ಕೇ ಬೇಡವಾದ ಭಾರತ ದ್ವೇಷಿ.. ಉಗ್ರ ಪ್ರೇಮಿ
ಭಾರತಕ್ಕೇ ಬುದ್ಧಿ ಹೇಳಿದ್ದ ಬುದ್ಧಿಗೇಡಿಯ ಅಸಲಿ ಕತೆ !
ಇದ್ದಕ್ಕಿದ್ದ ಹಾಗೇ ಎಸ್ಕೇಪ್ ಆಗಿದ್ದನೇಕೆ ಕೆನಡಾ ಪ್ರಧಾನಿ!

Share this Video
  • FB
  • Linkdin
  • Whatsapp

ಅವರು ಕೆನಡಾ ಅನ್ನೋ ಪ್ರಭಾವಿ ದೇಶದ ಪ್ರಧಾನಿ. ಆದ್ರೆ, ಅವರ ಎಡವಟ್ಟುಗಳು ಕೆನಡಾಗೇ ಕೆಸರು ಬಳೀತಿದೆ. ಅವತ್ತು ಭಾರತದ(India) ಏಜೆಂಟರು ಕೆನಡಾ (Canada) ಪ್ರಜೆನಾ ಕೊಂದಿದ್ದಾರೆ ಅಂತ ಸಾಕ್ಷಿ ಇಲ್ಲದೇ ಸುಳ್ಳು ಹೇಳಿದೋನು, ಇವತ್ತು ಭಾರತ ನಮ ಜೊತೆಗಿರ್ಬೇಕು ಅಂತ ಬೇಡ್ಕೊಳ್ತಿದ್ದಾನೆ. ಕೆನಡಾಕ್ಕೇ ಬೇಡವಾದ ಭಾರತ ದ್ವೇಷಿ.. ಉಗ್ರ ಪ್ರೇಮಿ.. ಭಾರತಕ್ಕೇ ಬುದ್ಧಿ ಹೇಳೋ ಸಾಹಸ ಮಾಡಿದ್ದ. ಜಸ್ಟಿನ್ ಟ್ರುಡೊ(Justin Trudeau) ನಿನ್ನೆ ಮೊನ್ನೆ ತನಕ, ಕೆನಡಾದ ಪ್ರಧಾನಿ ಅಂತಷ್ಟೇ ಪರಿಚಯವಿದ್ದ ಟ್ರುಡೊ ನಿಜವಾದ ಬಣ್ಣ ಈಗ ಬಯಲಾಗಿದೆ. ಈತ ಖಲಿಸ್ತಾನಿಗಳ ಪ್ರೇಮಿ.. ಭಾರತದ ದ್ವೇಷಿ ಅನ್ನೋ ಸಂಗತಿ ಜಗತ್ತಿಗೇ ಗೊತ್ತಾಗಿದೆ. ಮೊನ್ನೆ ಈತ, ಕೆನಡಾದ ಸಂಸತ್ತಿನಲ್ಲಿ, ಭಾರತದ ಬಗ್ಗೆ ಹೇಳಿದ್ದ ಆ ಮಾತು, ಜಗತ್ತಿನ ಗಮನ ಸೆಳೆದಿತ್ತು. ಭಾರತದಲ್ಲಿದ್ದ ಕೆನಡಾ ರಾಜತಾಂತ್ರಿಕ ಅಧಿಕಾರಿನಾ, ಕರೆಸಿಕೊಂಡು, ಮುಖಕ್ಕೆ ಮಂಗಳಾರತಿ ಎತ್ತಿ, ಉಗಿದು ಉಪ್ಪಿನಕಾಯಿ ಹಾಕಿ ಕಳಿಸಿತ್ತು. ಅಷ್ಟೇ ಅಲ್ಲ, ಇನ್ನೈದು ದಿನದಲ್ಲಿ ಭಾರತ ಬಿಟ್ಟು ತೊಲಗದಿದ್ರೆ, ಒದ್ ಓಡುಸ್ತೀವಿ ಅನ್ನೋ ಹಾಗೆ ಅವಾಜ್ ಹಾಕ್ತು. ಆಗ ಕೆನಡಾದ ಆ ಅಧಿಕಾರಿ, ಕ್ಯಮರಾನ್ ಮಕೆ ಮಖ ಊದುಸ್ಕೊಂಡ್ ಹೋದ. ಇಷ್ಟು ಸಾಲದು ಅಂತ, ಕೆನಡಾ ಭಾರತದ ವಿರುದ್ಧ ಏನೇನೋ ಹೇಳೋಕ್ ಶುರುಮಾಡ್ತು. ಆದ್ರೆ ಮುಳ್ಳನ್ನ ಮುಳ್ಳಿಂದಲೇ ತೆಗೀಬೇಕು ಅನ್ನೋ ಯುದ್ಧ ಮರ್ಮ ಅರಿತಿರೋ ಭಾರತ, ಕೆನಡಾ ತಲೆ ತಿರುಗೋ ಹಾಗೆ ಟಕ್ಕರ್ ಕೊಡ್ತಾ ಇದೆ.

ಇದನ್ನೂ ವೀಕ್ಷಿಸಿ: ವಾರಣಾಸಿಯಲ್ಲಿ ಸಿದ್ಧವಾಗಲಿದೆ ಕ್ರಿಕೆಟ್ ಕಾಶಿ! ತ್ರಿಶೂಲದಂತೆ ಫ್ಲಡ್ಲೈಟ್, ಢಮರುಗದಂತೆ ಪ್ರವೇಶ ದ್ವಾರ!

Related Video