ತಾಲಿಬಾನ್ ಉಗ್ರಕೋಟೆಯಲ್ಲಿ ಪಾಕ್ ಏಜೆಂಟ್, ಇಂಡಿಯಾ ಆನ್ ಹೈ ಅಲರ್ಟ್.!

- ತಾಲಿಬಾನ್‌ ಸರ್ಕಾರದಲ್ಲಿ ಪಾಕ್‌ ಐಎಸ್‌ಐ ‘ಕೈವಾಡ’!- ಕಾಬೂಲ್‌ಗೆ ತಲುಪಿದ ಐಎಸ್‌ಐ ಮುಖ್ಯಸ್ಥ- ಪಾಕಿಸ್ತಾನದ ಹಕ್ಕಾನಿ ಉಗ್ರರ ಪರ ಲಾಬಿ?

Share this Video
  • FB
  • Linkdin
  • Whatsapp

ಕಾಬೂಲ್ (ಸೆ. 06): ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಕುರಿತು ತಾಲಿಬಾನ್‌ನ ಹಕ್ಕಾನಿ ಹಾಗೂ ಬರಾ​ದರ್‌ ಬಣ​ಗಳ ನಡು​ವೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ. ಅದನ್ನು ಪರಿಹರಿಸಲು ಹಾಗೂ ನಿಸ್ತೇ​ಜ​ಗೊಂಡಿ​ರುವ ಅಷ್ಘಾ​ನಿ​ಸ್ತಾನ ಸೇನೆಯ ಮೇಲೆ ಹಿಡಿತ ಸಾಧಿ​ಸ​ಲು ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥ ಜನರಲ್‌ ಫಯಾಜ್‌ ಹಮೀದ್‌ ಹಮೀದ್‌ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶ್ವದ 13 ನಾಯಕರಲ್ಲಿ ಪ್ರಧಾನಿ ಮೋದಿ ನಂ 1, ಜಾಗತಿಕ ಮಟ್ಟದಲ್ಲಿ ನಮೋ ಸಂಚಲನ

ಈ ಮೂಲಕ, ‘ತಾಲಿಬಾನ್‌ ಸೇರಿದಂತೆ ಯಾವುದೇ ಉಗ್ರ ಸಂಘಟನೆಗೂ ತಾನು ಆಶ್ರಯ ನೀಡಿಲ್ಲ’ ಎಂದೇ ವಾದಿಸಿಕೊಂಡು ಬಂದಿದ್ದ ಪಾಕಿಸ್ತಾನದ ನಿಜಬಣ್ಣ ಐಎಸ್‌ಐ ಮುಖ್ಯಸ್ಥನ ಕಾಬೂಲ್‌ ಭೇಟಿಯೊಂದಿಗೆ ಮತ್ತೊಮ್ಮೆ ಬಯಲಾಗಿದೆ. ಆಫ್ಘನ್‌ ವಿದ್ಯ​ಮಾ​ನ​ದಲ್ಲಿ ನೇರ​ವಾಗಿ ಹಸ್ತ​ಕ್ಷೇಪ ಮಾಡು​ತ್ತಿ​ರು​ವುದು ರುಜು​ವಾ​ತಾ​ಗಿ​ದೆ. ಹಮೀದ್‌ ಭೇಟಿಯನ್ನು ಪಾಕಿಸ್ತಾನದ ಅಧಿಕಾರಿಗಳೇ ಖಚಿತಪಡಿಸಿದ್ದಾರೆ. ಈ ಬೆಳವಣಿಗೆಯನ್ನು ಭಾರತ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.

Related Video