
ವಿಶ್ವದ 13 ನಾಯಕರಲ್ಲಿ ಪ್ರಧಾನಿ ಮೋದಿ ನಂ 1, ಜಾಗತಿಕ ಮಟ್ಟದಲ್ಲಿ ನಮೋ ಸಂಚಲನ
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿಶ್ವದಲ್ಲೇ ನಂ.1 ನಾಯಕ ಎನ್ನುವುದನ್ನು ಸಾಬೀತುಪಡಿಸಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದಾರೆ.
ಬೆಂಗಳೂರು (ಸೆ. 06): ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿಶ್ವದಲ್ಲೇ ನಂ.1 ನಾಯಕ ಎನ್ನುವುದನ್ನು ಸಾಬೀತುಪಡಿಸಿಕೊಂಡಿದ್ದಾರೆ. ಅಮೆರಿಕದ ‘ಮಾರ್ನಿಂಗ್ ಕನ್ಸಲ್ಟ್’ ಎಂಬ ಟೆಕ್ ಇಂಟೆಲಿಜೆಂಟ್ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ಅವರಿಗೆ ಶೇ.70 ರಷ್ಟುರೇಟಿಂಗ್ ಲಭ್ಯವಾಗಿದ್ದು, ವಿಶ್ವದ ಇತರ 13 ನಾಯಕರನ್ನು ಮೀರಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಖಿಲೇಶ್, ಮಾಯಾ ಆಟ ಮೋದಿಯನ್ನು ಕಟ್ಟಿ ಹಾಕುತ್ತಾ?
ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್, ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೊ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯು ಸೇರಿದಂತೆ 13 ನಾಯಕರನ್ನು ಜನಪ್ರಿಯತೆಯನ್ನು ಅದು ಸಮೀಕ್ಷೆಗೆ ಒಳಪಡಿಸಿತ್ತು. ಇವರೆಲ್ಲವನ್ನೂ ಪ್ರಧಾನಿ ಮೋದಿ ಹಿಂದಿಕ್ಕಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿ ಮೂಡಿಸಿರುವ ಸಂಚಲನ ಎಂತದ್ದು..? ನೀವೇ ನೋಡಿ..!