ಕೊರೋನಾ ಚೀನಾ ಸೃಷ್ಟಿಎಂಬುದಕ್ಕೆ ಸಿಕ್ತು ಮತ್ತೊಂದು ಸಾಕ್ಷ್ಯ, ಏನಿದರ ಅಸಲಿಯತ್ತು..?

- ಕೊರೊನಾ ವೈರಸ್‌ ಮೂಲ ಚೀನಾ ಎನ್ನುವುದಕ್ಕೆ ಸಿಕ್ತು ಸಾಕ್ಷ್ಯ

-  ಅಮೆರಿಕದ ಗುಪ್ತಚರ ಮಾಹಿತಿಗಳನ್ನು ಆಧರಿಸಿ ‘ವಾಲ್‌ ಸ್ಟ್ರೀಟ್‌ ಜರ್ನಲ್‌’ ಪತ್ರಿಕೆ ವರದಿ

ಆ ಬಗ್ಗೆ ವಿಶಾಲ ತನಿಖೆಯಾಗಬೇಕು ಎಂಬ ಕೂಗು ಎದ್ದಿದೆ

First Published May 28, 2021, 5:31 PM IST | Last Updated May 28, 2021, 5:37 PM IST

ನವದೆಹಲಿ (ಮೇ. 28): ವಿಶ್ವವನ್ನೇ ನಡುಗಿಸಿರುವ ಕೊರೋನಾ ವೈರಸ್‌ನ ಮೂಲ ಚೀನಾದ ವುಹಾನ್‌ನಲ್ಲಿರುವ ವೈರಾಣು ಸಂಸ್ಥೆ ಎಂಬ ವಿವಿಧ ದೇಶಗಳ ಆರೋಪಕ್ಕೆ ಮತ್ತಷ್ಟು ಶಕ್ತಿ ಬಂದಿದೆ.

ಬ್ಲ್ಯಾಕ್ ಫಂಗಸ್‌ಗೆ ಔಷಧಿ ಅಭಿವೃದ್ಧಿಪಡಿಸಿದವರು ಒಬ್ಬ ಕರಾವಳಿ ಕನ್ನಡಿಗ..!

ತನ್ನ ದೇಶದಲ್ಲಿ ಕೊರೋನಾ ಕಾಣಿಸಿಕೊಂಡಿದೆ ಎಂದು ಚೀನಾ ಅಧಿಕೃತವಾಗಿ ಘೋಷಿಸುವುದಕ್ಕೆ ಕೆಲ ತಿಂಗಳು ಮುನ್ನ ವುಹಾನ್‌ ವೈರಾಣು ಸಂಸ್ಥೆಯ ಮೂವರು ಸಂಶೋಧಕರು ತಮ್ಮನ್ನು ಆಸ್ಪತ್ರೆಗೆ ದಾಖಲಿಸುವಂತೆ ಕೋರಿಕೊಂಡಿದ್ದರು ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ. ಇದು ಸಂಚಲನಕ್ಕೆ ಕಾರಣವಾಗಿದೆ. ಈವರೆಗೂ ಬಹಿರಂಗವಾಗದೆ ಇದ್ದ ಅಮೆರಿಕದ ಗುಪ್ತಚರ ಮಾಹಿತಿಗಳನ್ನು ಆಧರಿಸಿ ‘ವಾಲ್‌ ಸ್ಟ್ರೀಟ್‌ ಜರ್ನಲ್‌’ ಪತ್ರಿಕೆ ವರದಿ ಪ್ರಕಟಿಸಿದೆ. 

Video Top Stories