ಪೆಸಿಫಿಕ್ ಮಹಾಸಾಗರಕ್ಕೆ 3 ಅಣ್ವಸ್ತ್ರ ಯುದ್ಧ ಹಡಗು ಕಳುಹಿಸಿದ ಅಮೆರಿಕ..!
ಪೂರ್ವ ಲಡಾಖ್‌ನ ಗಲ್ವಾನ್ ಗಡಿ ಭಾಗದಲ್ಲಿ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಇದರಲ್ಲಿ ಭಾರತದ 20 ಸೈನಿಕರು ಸಾವನ್ನಪ್ಪಿದ್ದರು. ಹೀಗಾಗಿ ಉಭಯ ದೇಶಗಳ ನಡುವೆ ಪರಿಸ್ಥಿತಿ ಯುದ್ದದ ಹಂತ ತಲುಪಿದೆ. ಇದರ ಬೆನ್ನಲ್ಲೇ ಅಮೆರಿಕ 3 ಯುದ್ದ ಹಡಗುಗಳನ್ನು ಪೆಸಿಫಿಕ್ ಮಹಾಸಾಗರಕ್ಕೆ ಕಳಿಸಿರುವುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜೂ.18): ಚೀನಾ ಯುದ್ಧೋನ್ಮಾದದ ನಡುವೆ ಅಮೆರಿಕದ ನಡೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ. ಅಮೆರಿಕದ 11 ಅಣ್ವಸ್ತ್ರ ಯುದ್ಧ ಹಡಗುಗಳ ಪೈಕಿ 3 ಅಣ್ವಸ್ತ್ರ ಹಡಗುಗಳು ಪೆಸಿಫಿಕ್ ಮಹಾಸಾಗರಕ್ಕೆ ಬಂದು ತಲುಪಿವೆ.
ಪೂರ್ವ ಲಡಾಖ್‌ನ ಗಲ್ವಾನ್ ಗಡಿ ಭಾಗದಲ್ಲಿ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಇದರಲ್ಲಿ ಭಾರತದ 20 ಸೈನಿಕರು ಸಾವನ್ನಪ್ಪಿದ್ದರು. ಹೀಗಾಗಿ ಉಭಯ ದೇಶಗಳ ನಡುವೆ ಪರಿಸ್ಥಿತಿ ಯುದ್ದದ ಹಂತ ತಲುಪಿದೆ.
ಭಾರತ ಯುದ್ಧಕ್ಕೆ ಸನ್ನದ್ಧವಾಗ್ತಿದ್ದಂತೆ ಎಚ್ಚೆತ್ತ ಕುತಂತ್ರಿ ಚೀನಾ!
ಇದರ ಬೆನ್ನಲ್ಲೇ ಅಮೆರಿಕ 3 ಯುದ್ದ ಹಡಗುಗಳನ್ನು ಪೆಸಿಫಿಕ್ ಮಹಾಸಾಗರಕ್ಕೆ ಕಳಿಸಿರುವುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಭಾರತ-ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಈ ಯುದ್ಧ ಹಡಗುಗಳನ್ನು ಕಳಿಸಿಲ್ಲ ಎನ್ನುವ ಮಾತುಗಳನ್ನು ಅಮೆರಿಕ ಹೇಳಿದೆಯಾದರೂ ಇದರ ಅರ್ಥ ಬೇರೆಯದ್ದೇ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.