Asianet Suvarna News

ಭಾರತ ಯುದ್ಧಕ್ಕೆ ಸನ್ನದ್ಧವಾಗ್ತಿದ್ದಂತೆ ಎಚ್ಚೆತ್ತ ಕುತಂತ್ರಿ ಚೀನಾ!

Jun 18, 2020, 3:59 PM IST

ಚೀನಾ ಹಾಗೂ ಭಾರತ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ. ಸೋಮವಾರ ರಾತ್ರಿ ಗಡಿಯಲ್ಲಿ ಚಿನಾ ಸೈನಿಕರು ಭಾರತದ ಇಪ್ಪತ್ತು ಸೈನಿಕರನ್ನು ಹತ್ಯೆಗೈದ ಬಳಿಕ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಮೂರೂ ಸೇನಾ ಪಡೆಗಳಿfಗೆ ಯುದ್ಧಕ್ಕೆ ಸನ್ನದ್ಧವಾಗುವಂತೆ ಸರ್ಕಾರ ಸೂಚಿಸಿದ್ದು, ಪಿಎಂ ಮೋದಿ ಪ್ರತೀಕಾರದ ಪ್ರತಿಜ್ಞೆ ಮಾಡಿದ್ದಾರೆ.

ಇವೆಲ್ಲದರ ಮುಂದುವರೆದ ಭಾಗ ಎಂಬಂತೆ ರಜೆಯಲ್ಲಿದ್ದ ಭಾರತೀಯ ಸೈನಿಕರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದು, ಅನೇಕಕ ಮಂದಿ ಸೈನಿಕರನ್ನು ಗಡಿ ಪ್ರದೇಶಕ್ಕೆ ರವಾನಿಸಲಾಗಿದೆ. ಜೊತೆಗೆ ಯುದ್ಧಕ್ಕೆ ಬೇಕಾಗುವ ಶಸ್ತ್ರಾಸ್ತ್ರಗಳನ್ನೂ ಪೂರೈಸಲಾಗುತ್ತಿದೆ.

ಭಾರತದ ಈ ನಡೆ ಬೆನ್ನಲ್ಲೇ ಅತ್ತ ಚೀನಾ ಕೂಡಾ ಭಾರೀ ಪ್ರಮಾಣದಲ್ಲಿ ತನ್ನ ಸೈನಿಕರನ್ನು ಗಡಿಯಲ್ಲಿ ನಿಯೋಜಿಸಿದೆ.