Elon Musk: ಎಲನ್ ಮಸ್ಕ್ ಎಡವಿದ್ದೆಲ್ಲಿ..? ವಿಶ್ವ ವಿಜ್ಞಾನಿಗಳ ಪ್ರಶ್ನೆಗಳೇನು..?
ಶಸ್ತ್ರ ಚಿಕಿತ್ಸೆ ಮೂಲಕ ಮೆದುಳಿನಲ್ಲಿ ಚಿಪ್ ಅಳವಡಿಸಲಾಗುತ್ತೆ
ಚಿಪ್‌ನಿಂದಾಗಿ ಮೆದುಳು ರಿಮೋಟ್ ನಂತೆ ಕೆಲಸ ಮಾಡುತ್ತೆ
ವ್ಯಕ್ತಿ ಯೋಚಿಸಿದ್ದನ್ನು ಚಿಪ್ ಕೆಲಸ ಮಾಡಲಾರಂಭಿಸುತ್ತೆ
ಮೊಬೈಲ್ & ಕಂಪ್ಯೂಟರ್ ಕಂಟ್ರೋಲ್ ಮಾಡಬಹುದು
ವಾರದ ಹಿಂದೆ ಎಲನ್ ಮಸ್ಕ್ ಜಗತ್ತಿಗೆ ಅಚ್ಚರಿ ಸುದ್ದಿ ಕೊಟ್ಟಿದ್ದ. ಮನುಷ್ಯನ ಮೆದುಳನ್ನೇ (Human Brain) ಕಂಟ್ರೋಲ್ ಮಾಡುವ ಸಾಧನ ಕಂಡು ಹಿಡಿಯಲಾಗಿದೆ. ಮೆದುಳಿನಲ್ಲಿ ಚಿಪ್ ಅಳವಡಿಸುವುದರಲ್ಲಿ ಯಶಸ್ಸು ಸಿಕ್ಕಿದೆ. ಮನುಷ್ಯನೊಬ್ಬ ಕೂತಲ್ಲೇ ಮೊಬೈಲ್(Mobile) ಮತ್ತು ಕಂಪ್ಯೂಟರ್(Computer) ಕಂಟ್ರೋಲ್ ಮಾಡುಬಹುದೆಂದು ಮಸ್ಕ್ ಹೇಳಿಕೊಂಡಿದ್ದ. ಮಸ್ಕ್‌ನ ಈ ಹೇಳಿಕೆಯಿಂದ ವಿಶ್ವ ವಿಜ್ಞಾನ ಆತಂಕ ಪಟ್ಟಿದೆ. ಹಲವು ಅನುಮಾನ ಮತ್ತು ಪ್ರಶ್ನೆಗಳನ್ನು ವಿಜ್ಞಾನಿಗಳು ಹುಟ್ಟು ಹಾಕಿದ್ದಾರೆ. ಎಲನ್ ಮಸ್ಕ್(Elon Musk) ಈ ಪ್ರಯೋಗದಲ್ಲಿ ಸಾಲು ಸಾಲು ಅನುಮಾನಗಳನ್ನು ಹುಟ್ಟು ಹಾಕಿದ್ದಾನೆಂದು ವಿಶ್ವ ವಿಜ್ಞಾನ ತಂಡವೊಂದು ಹೇಳುತ್ತಿದೆ. ಎಲನ್ ಮಸ್ಕ್ನ ಈ ಪ್ರಯೋಗ ಕುರಿತು ವಿಶ್ವ ವಿಜ್ಞಾನಿಗಳ ತಂಡ ಆತಂಕ ಮತ್ತು ಕೆಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಕುರಿತು ಇನ್ನೂ ಹಲವು ಪ್ರಮುಖ ಆರೋಪಗಳನ್ನು ಕೆಲವು ವಿಜ್ಞಾನ ಸಂಶೋಧನಾ ಸಂಸ್ಥೆಗಳು ಮಾಡಿವೆ. ಎಲಾನ್ ಮಸ್ಕ್ ನ್ಯೂರೋಲಿಂಕ್ ಸಂಸ್ಥೆ ತಯಾರಿಸಿದ ಬ್ರೈನ್ ಕಂಟ್ರೋಲ್ ಚಿಪ್ ಬಗ್ಗೆ ಇನ್ನೂ ಅನೇಕರು ಖ್ಯಾತೆ ತೆಗೆದಿದ್ದಾರೆ.
ಇದನ್ನೂ ವೀಕ್ಷಿಸಿ: ಕೃಷ್ಣ vs ರಾಮ ಭಕ್ತರ ನಡುವೆ ಸವಾಲು..! ‘ಓರ್ಚಾ’ದ ಶ್ರೀರಾಮನಿಗೆ ಪೊಲೀಸರಿಂದ ಗನ್ ಸೆಲ್ಯೂಟ್..!