Asianet Suvarna News Asianet Suvarna News

ಮುಸ್ಲಿಂ ದೇಶವಾದ್ರೂ ಭಾರತದ ಸ್ನೇಹಕ್ಕೆ ಮನ್ನಣೆ: ಅರಬ್‌ ದೊರೆಗಳ ನಾಡಲ್ಲಿ ಹಿಂದೂ ದೇವಾಲಯ ಲೋಕಾರ್ಪಣೆ

ಅರಬ್ ದೊರೆಗಳ ನಾಡಲ್ಲಿ ಹಿಂದೂ ದೇಗುಲ ಲೋಕಾರ್ಪಣೆ
ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ ಮಂದಿರ ಉದ್ಘಾಟನೆ
ಮುಸ್ಲಿಂ ದೇಶದಲ್ಲಿ ಹಿಂದೂ ದೇಗುಲ ಉದ್ಘಾಟಿಸಿದ ಮೋದಿ!

ಅರಬ್ ಸಂಸ್ಥಾನ ಅಬುಧಾಬಿಯಲ್ಲಿ(Abu Dhabi)  ಮೊದಲ ಹಿಂದೂ ದೇವಸ್ಥಾನ(Hindu Temple) ಉದ್ಘಾಟನೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅಮೃತಹಸ್ತದಿಂದ ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ವಿಶ್ವದ 3ನೇ ಅತೀ ದೊಡ್ಡ ಹಿಂದೂ ದೇಗುಲವನ್ನು ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಬಾಪ್ಸ್ ಮಂದಿರದ ಒಳ ಪ್ರವೇಶಕ್ಕೂ ಮೊದಲು ಗಂಗಾ ಜಲವನ್ನು ಸಮರ್ಪಿಸಿದ ಪ್ರಧಾನಿ ಮೋದಿ ಬಳಿಕ ಪೂಜ್ಯ ಸಂತರ ಜೊತೆ ಮಂದಿ ಪ್ರವೇಶಿಸಿದರು. ಮಂದಿರ ಪ್ರವೇಶದ್ವಾರದಲ್ಲಿ ಮಹಾಂತ ಸ್ವಾಮಿ ಮಹರಾಜ್ ಗುರುಗಳಿಗೆ ವಂದಿಸಿದ  ಪ್ರಧಾನಿ ಮೋದಿ ಭವ್ಯ ಮಂದಿರ ಒಳ ಪ್ರವೇಶಿಸಿದರು. ಬಳಿಕ ಮಹಾಂತ ಸ್ವಾಮಿ ಮಹಾರಾಜ್ ಸಂತರ ಜೊತೆ ಮಂದಿರ ಉದ್ಘಾಟಿಸಿದರು.

ಇದನ್ನೂ ವೀಕ್ಷಿಸಿ:  ಲೋಕಸಭೆಗೆ ಗುಡ್‌ಬೈ ಹೇಳಿದ ಕೈ ನಾಯಕಿ: ರಾಜಸ್ಥಾನದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ಸೋನಿಯಾ !

Video Top Stories