ಲೋಕಸಭೆಗೆ ಗುಡ್‌ಬೈ ಹೇಳಿದ ಕೈ ನಾಯಕಿ: ರಾಜಸ್ಥಾನದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ಸೋನಿಯಾ !

ಅನಿವಾರ್ಯ ಸ್ಥಿತಿಯಲ್ಲಿ ರಾಜಕಾರಣಕ್ಕೆ ಕಾಲಿಟ್ಟ ಸೊನಿಯಾ ಗಾಂಧಿ
ರಾಜೀವ್ ಗಾಂಧಿ ಹತ್ಯೆಯಾದ ಎಂಟು ವರ್ಷಗಳ ರಾಜಕೀಯ ಎಂಟ್ರಿ 
ರಾಜಕೀಯದುದ್ದಕ್ಕೂ ಬಿಜೆಪಿ ವಿರೋಧಿಸಿಕೊಂಡೇ ಬಂದ ಸೋನಿಯಾ

Share this Video
  • FB
  • Linkdin
  • Whatsapp

ಮೂರು ದಶಕಗಳ ಚುನಾವಣಾ ರಾಜಕೀಯಕ್ಕೆ ಸೋನಿಯಾ ಗಾಂಧಿ(Sonia Gandhi)ವಿದಾಯ ಹೇಳಿದ್ದಾರೆ. ಲೋಕಸಭೆ ಬದಲು ರಾಜ್ಯಸಭೆಯಿಂದ(Rajyasabha) ಸಂಸತ್ ಪ್ರವೇಶಕ್ಕೆ ಸೋನಿಯಾ ಮುಂದಾಗಿದ್ದಾರೆ. ರಾಜಸ್ಥಾನದಿಂದ(Rajasthan) ರಾಜ್ಯಸಭೆಗೆ ನಾಮಪತ್ರವನ್ನು ಸೋನಿಯಾ ಗಾಂಧಿ ಸಲ್ಲಿಸಿದ್ದಾರೆ. ಅನಾರೋಗ್ಯ ಕಾರಣ ಲೋಕಸಭೆ(Loksabha) ಬದಲು ರಾಜ್ಯಸಭೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ದೆಹಲಿಗೆ ಹತ್ತಿರ ಇರುವ ಕಾರಣ ರಾಜಸ್ಥಾನವನ್ನು ಸೋನಿಯಾ ಗಾಂಧಿ ಆರಿಸಿಕೊಂಡಿದ್ದಾರೆ. ಲೋಕಸಭೆಯಲ್ಲಿ ರಾಯ್‌ ಭರೇಲಿಯನ್ನು ಸೋನಿಯಾ ಪ್ರತಿನಿಧಿಸುತ್ತಿದ್ದರು. ರಾಹುಲ್ ಗಾಂಧಿ, ಪ್ರಿಯಾಂಕಾ ಜೊತೆ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿಗೆ ಸಾಥ್ ನೀಡಿದ ಅಶೋಕ್ ಗೆಹ್ಲೋಟ್.ರಾಜಸ್ಥಾನದಲ್ಲಿ ಒಂದು ಸ್ಥಾನ ಗೆಲ್ಲುವಷ್ಟು ಕಾಂಗ್ರೆಸ್‌ಗೆ ಸಂಖ್ಯಾಬಲವಿದೆ.

ಇದನ್ನೂ ವೀಕ್ಷಿಸಿ: Rajya Sabha: 3 ರಾಜ್ಯಸಭಾ ಸ್ಥಾನಗಳನ್ನ 3 ಪಾಲು ಮಾಡಿದ್ದ ಕೆಪಿಸಿಸಿ: ಟಿಕೆಟ್ ಕೊಡಿಸುವಲ್ಲಿ ಮೇಲುಗೈ ಸಾಧಿಸಿದ್ರಾ ಡಿಕೆಶಿ ?

Related Video