Asianet Suvarna News Asianet Suvarna News

ಚೀನಾದಲ್ಲಿ ಅಗ್ನಿ ದುರಂತ: 42 ಅಂತಸ್ತಿನ ಬಹುಮಹಡಿ ಕಟ್ಟಡ ಧಗಧಗ

ಚೀನಾದಲ್ಲಿ ಬೃಹತ್ ಅಗ್ನಿ ಅನಾಹುತವೊಂದು ಸಂಭವಿಸಿದ್ದು, ಬಹುಮಹಡಿ ಕಟ್ಟಡ ಬೆಂಕಿಗಾಹುತಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚೀನಾದಲ್ಲಿ ಬೃಹತ್ ಅಗ್ನಿ ಅನಾಹುತವೊಂದು ಸಂಭವಿಸಿದ್ದು, ಬಹುಮಹಡಿ ಕಟ್ಟಡ ಬೆಂಕಿಗಾಹುತಿಯಾಗಿದೆ. ಚೀನಾದಲ್ಲಿ ಸರ್ಕಾರಿ ಸ್ವಾಮ್ಯದ ದೂರ ಸಂಪರ್ಕ ಕಂಪನಿಯ ಕಟ್ಟಡದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. 42 ಅಂತಸ್ತಿನ ಈ ಬಹುಮಹಡಿ ಕಟ್ಟಡ ಕ್ಷಣದಲ್ಲೇ ಧಗಧಗ ಎನಿಸಿದೆ. ಚೀನಾದ ಹುನಾನ್ ಪ್ರಾಂತ್ಯದ ಛಂಗ್ಸಾದಲ್ಲಿ ಸೆಪ್ಟಂಬರ್ 16 ರಂದು ಈ ಅನಾಹುತ ಸಂಭವಿಸಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಚೀನಾ ಹೇಳಿದೆ. ಬಹು ಮಹಡಿ ಕಟ್ಟಡದಲ್ಲಾದ ಈ ಅಗ್ನಿ ಅನಾಹುತದಿಂದ  ಆಕಾಶದೆತ್ತರಕ್ಕೆ ದಟ್ಟ ಹೊಗೆ ಹೋಗುತ್ತಿರುವುದು ಕಾಣಿಸುತ್ತಿದೆ.  ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ,
 

Video Top Stories