Asianet Suvarna News Asianet Suvarna News

ಹೇಗಿತ್ತು ಗೊತ್ತಾ ಜಗತ್ತೇ ಕಾಣದ ನಿಗೂಢ ಕಾರ್ಯಾಚರಣೆ..? ಹೇಗೆ ನಡೆಯುತ್ತೆ ಗೊತ್ತಾ ಮೊಸಾದ್ ಕಾರ್ಯಾಚರಣೆ?

ಬರೋಬ್ಬರಿ 7 ವರ್ಷಗಳ ಕಾಲ ನಡೆದ ರಣಭೀಕರ ಆಪರೇಷನ್, ರೆಡ್ ಪ್ರಿನ್ಸ್ ಸಾವಿನ ಮೂಲಕ ಅಂತ್ಯಗೊಂಡಿತ್ತು.. ಒಂದು ಸಲ ಮಿಷನ್ ಆರಂಭಿಸಿದ್ರೆ, ಅದರ ಅಂತ್ಯ ಕಾಣೋ ತನಕ ಇಸ್ರೇಲ್ ನಿಲ್ಲೋದಿಲ್ಲ ಅನ್ನೋದು, ಈ ಆಪರೇಷನ್ ಮೂಲಕ ಸಾಬೀತಾಯ್ತು.

First Published Sep 24, 2024, 12:05 PM IST | Last Updated Sep 24, 2024, 12:05 PM IST

ಬೆಂಗಳೂರು(ಸೆ.24):  ಅದೊಂದು ಪುಟ್ಟ ದೇಶ.. ಅದರ ವಿಸ್ತೀರ್ಣ, ಕೇರಳದ ಅರ್ಧದಷ್ಟು.. ಜನಸಂಖ್ಯೆ, ಬೆಂಗಳೂರಿಗಿಂತಾ ಕಮ್ಮಿ.. ನೀವೇನಾದ್ರೂ ಪ್ರಪಂಚದ ಭೂಪಟ ತೆಗೆದು ನೋಡಿದ್ರೆ, ಆ ದೇಶ ನಿಮ್ಮ ಕಣ್ಣಿಗೆ ಕಾಣೋದೂ ಉಲ್ಲ.. ಅಷ್ಟು ಪುಟ್ಟ ದೇಶದ ಹೆಸರು.. ಇಸ್ರೇಲ್..

ಶತ್ರುಮಂಡಲದ ನಟ್ಟ ನಡುವೆ ಇದೆ, ಇಸ್ರೇಲ್.. ಸುತ್ತೆಲ್ಲಾ ಶತ್ರುಗಳು.. ಪಕ್ಕದಲ್ಲೇ ಸಮುದ್ರ.. ಉಗ್ರರೇ ತುಂಬಿರೋ ವೈರಿದೇಶಗಳು ಇಸ್ರೇಲನ್ನ ಹುರಿದುಮುಕ್ಕೋದಕ್ಕೆ ಹೊಂಚು ಹಾಕಿವೆ.. ಆದ್ರೆ, ಮೊನ್ನೆ ನಡೀತಲ್ಲಾ,  ಪೇಜರ್ ಬ್ಲಾಸ್ಟ್, ವಾಕಿಟಾಕಿ ಬ್ಲಾಸ್ಟ್, ಇಂಥಾ ರಣತಂತ್ರಗಳ ಮೂಲಕವೇ ಇಸ್ರೇಲ್ ಬದುಕಿದೆ.. ಬದುಕ್ತಾ ಇದೆ.. ಇಂಥಾ ಸ್ಪೆಷಲ್ ಆಪರೇಷನ್ಗಳ ಹಿಸ್ಟರಿನಾ, ನಾವು ಇನ್ಮುಂದೆ  ನಿಮ್ಮ ಕಣ್ಣೆದುರು ತೆರೆದಿಡ್ತೀವಿ.. ಅಂಥಾ ಐತಿಹಾಸಿಕ ಮೆಗಾ ಆಪರೇಷನ್ನ ಮೊದಲ ಕತೆ. 

ಊರಿಗೆ ಊರೇ ನಮ್ದು: ದೇವಸ್ಥಾನ, ಸಾರಿಗೆ ಬಸ್ ಟರ್ಮಿನಲ್ ಎಲ್ಲವೂ ವಕ್ಫ್ ಆಸ್ತಿ ಎಂದು ಘೋಷಣೆ!

ನೀವೀಗ ನೋಡಿದ್ರಲ್ಲಾ ಒಂದು ಕೊಲೆ, ಇಂಥಾ ಒಂದಲ್ಲ,. ನೂರಾರು ಹತ್ಯೆಗಳು ನಡೆದಿದ್ದಾವೆ.. ಆ ಹತ್ಯೆಗಳ ಹಿಂದಿರೋದು, ಇಸ್ರೇಲಿನ ಪಾಲಿಗೆ ಹೃದಯವೂ ಆಗಿರೋ, ಮೆದುಳೂ ಆಗಿರೋ ಗುಪ್ತಚರ ಸಂಸ್ಥೆ, ಮೊಸಾದ್.. ಉಗ್ರಸರ್ಪಗಳ ರಣಬೇಟೆಯಾಡ್ತಾ ಇರೋ ಮೊಸಾದ್ನ ತೋಳ್ಬಲ ಜಗತ್ತಿಗೆ ಪರಿಚಯ ಆಗಿದ್ದೇ, ಈ ಸರಣಿ ಹತ್ಯೆಯ ನಂತರ.. ಅಷ್ಟಕ್ಕೂ, ಮೊಸಾದ್, ಈ ರಣಬೇಟೆಗೆ ಧುಮುಕಿದ್ದೇಕೆ? ಅದು ಗೊತ್ತಾಗ್ಬೇಕು ಅಂದ್ರೆ ಜಗತ್ತನ್ನೇ ಬೆಚ್ಚಿಬೀಳಿಸಿದ ಆ ದುರಂತ ಘಟನೆನಾ ನಿಮಗೆ ತೋರುಸ್ಬೇಕು..

ಈ ಎಪಿಸೋಡ್ ಶುರುವಾದಾಗಲೇ ಒಬ್ಬನ ಹೆಣ ಉರುಳಿತ್ತಲ್ಲ, ಅದು ಇವನದ್ದೇ.. ಆದ್ರೆ, ಈತನನ್ನ ಸಾಯಿಸೋಕೆ ಮೊಸಾದ್ ಆಯ್ಕೆ ಮಾಡ್ಕೊಂಡಿದ್ದ ದಾರಿ ಇತ್ತಲ್ಲ, ಅದು ಅತ್ಯಂತ ಅಪಾಯಕಾರಿ, ಪ್ರಮಾದಕಾರಿಯಾಗಿತ್ತು.. ಅದರ ರೋಚಕ ರಹಸ್ಯ ತೆರೆದಿಡ್ತೀವಿ.

ಇಸ್ರೇಲಿನ ಆತ್ಮಾಭಿಮಾನ ಕೆರಳಿಸಿದವರ ರಣಬೇಟೆಗೆ, ಹಸಿದ ಹೆಬ್ಬುಲಿಯಂತೆ ಹೊರಟಿತ್ತು ಮೊಸಾದ್..  ಅಜುಮಾಸು 30 ಲಕ್ಷ ಜನಸಂಖ್ಯೆ ಇರೋ ದೇಶ, ಇನ್ನೂ ತನ್ನ ಕಾಲಮೇಲೆ ತಾನು ನೆಟ್ಟಗೆ ನಿಂತಿಲ್ಲದ ದೇಶ, ಆ ದೇಶವನ್ನ ಆಪೋಷನ ತಗೊಳೋಕೆ ಎಷ್ಟು ಹೊತ್ತು ಅಂತ ಭಾವಿಸಿದ್ರು ಶತ್ರುಗಳು.. ಉಗ್ರರು.. ಅವರೆಲ್ಲರೂ ಮೊಸಾದ್ ಅನ್ನೋ ಅತಿಮಾನುಷ ಸಂಸ್ಥೆನಾ ನೆಗ್ಲೆಕ್ಟ್ ಮಾಡಿದ್ದೇ, ಸಾವಿಗೆ ಆಹ್ವಾನ ಕೊಟ್ಟಂತಿತ್ತು..

ಅವತ್ತು ಬರೀ ಈ ಮೂವರನ್ನಷ್ಟೇ ಅಲ್ಲ, ಪ್ಯೇಲೆಸ್ತೇನಿ ಉಗ್ರರ ಅಡಗುತಾಣಗಳೆಲ್ಲಾ ಧ್ವಂಸವಾಗಿದ್ರು.. ನೂರಾರು ಉಗ್ರರು ಪ್ರಾಣ ಬಿಟ್ಟಿದ್ರು.. ಇದೇ ಥರ, ಶತ್ರುಗಳ ಸಂಹಾರ ನಡೆದಿತ್ತು.. 1973ರ ಜೂನ್ 28ನೇ ತಾರೀಖು, ಪ್ಯಾರಿಸ್ನಲ್ಲಿ ಮೊಹಮ್ಮದ್ ಬೌದಿಯಾ, 1979ರ ಡಿಸಂಬರ್ 15ರಂದು ಅಲಿ ಸಲೆಮ್ ಅಹ್ಮದ್ ಮತ್ತು ಇಬ್ರಾಹಿಂದ ಅಬ್ದುಲ್ ಅಜಿಜ್ ಹತ್ಯೆ ಮಾಡಿದ್ರು..  1982ರಿಂದ 1988ರ ತನಕ ಒಟ್ಟು, 6 ಮಂದಿಯ ಬಲಿ ಪಡೆದಿದ್ರು.. ಆದ್ರೆ, ಇಸ್ರೇಲ್ ಪಾಲಿಗೆ ಅತಿ ದೊಡ್ಡ ಸವಾಲಾಗಿದ್ದವನು, ಅವನೊಬ್ಬ ಮಾತ್ರ.

ಪ್ರತಿ ದಿನವೂ ಗೆಲ್ಲುತ್ತಿದೆ ಹೇಗೆ ಆ ಪುಟ್ಟ ರಾಷ್ಟ್ರ; ಕೇರಳದ ಅರ್ಧದಷ್ಟು ಭೂಮಿ, ಬೆಂಗಳೂರಿಗಿಂತಾ ಕಮ್ಮಿ ಜನ!

ಮೊಸಾದ್ ಗೆ ಈಗ ಟಾರ್ಗೆಟ್ ಆಗಿದ್ದವನು, ಸಾಮಾನ್ಯದವನಲ್ಲ. ಅವನನ್ನ ಕರೀತಿದ್ದದ್ದೇ, ರೆಡ್ ಪ್ರಿನ್ಸ್ ಅಂತ.. ಮ್ಯೂನಿಕ್ ದುರಂತದ ಮಾಸ್ಟರ್ ಮೈಂಡ್ ಇವನೇ ಅಂತ ಇಸ್ರೇಲಿಗೆ ಖಚಿತವಾಗಿ ಗೊತ್ತಿತ್ತು.. ಬಟ್ ಅವನು ಎಲ್ಲಿದಾನೆ? ಈ ಪ್ರಶ್ನೆಗೆ ಉತ್ತರ ಗೊತ್ತಿದ್ದದ್ದು ಅವನೊಬ್ಬನಿಗೆ ಮಾತ್ರ..

7 ವರ್ಷ.. ಬರೋಬ್ಬರಿ 7 ವರ್ಷಗಳ ಕಾಲ ನಡೆದ ರಣಭೀಕರ ಆಪರೇಷನ್, ರೆಡ್ ಪ್ರಿನ್ಸ್ ಸಾವಿನ ಮೂಲಕ ಅಂತ್ಯಗೊಂಡಿತ್ತು.. ಒಂದು ಸಲ ಮಿಷನ್ ಆರಂಭಿಸಿದ್ರೆ, ಅದರ ಅಂತ್ಯ ಕಾಣೋ ತನಕ ಇಸ್ರೇಲ್ ನಿಲ್ಲೋದಿಲ್ಲ ಅನ್ನೋದು, ಈ ಆಪರೇಷನ್ ಮೂಲಕ ಸಾಬೀತಾಯ್ತು. 

Video Top Stories