Asianet Suvarna News Asianet Suvarna News

ಮತ್ತೆ ಅರೆಸ್ಟ್ ಆಗಿ ಜೈಲುಪಾಲಾದರಾ ಟ್ರಂಪ್?:ಅಂತರ್ಯುದ್ಧಕ್ಕೆ ನಾಂದಿ ಹಾಡುತ್ತಾ ಮಾಜಿ ಅಧ್ಯಕ್ಷರ ಬಂಧನ..?

ಅಮೆರಿಕಾದಲ್ಲೀಗ ಶುರುವಾಗಿದೆ ಅಂತರ್ಯುದ್ಧದ ಭೀತಿ!
ಮೂರು ತಿಂಗಳ ಅಂತರದಲ್ಲಿ ಎರಡನೇ ಸಲ ಅರೆಸ್ಟ್!
ಡೊನಾಲ್ಡ್ ಟ್ರಂಪ್ ಅರೆಸ್ಟ್! ಎಷ್ಟು ಸತ್ಯ?ಎಷ್ಟು ಸುಳ್ಳು?

First Published Jun 15, 2023, 11:23 AM IST | Last Updated Jun 15, 2023, 11:23 AM IST

ಜಗತ್ತಿಗೆ ತಾನೇ ಬಿಗ್ ಬ್ರದರ್ , ಭೂಮಂಡದಲ್ಲಿ ನಾನೇ ಬಿಗ್ ಬಾಸ್ ಅಂತ ಮೆರೀತಿದ್ದ ದೇಶ ಯಾವ್ದಾದ್ರೂ ಇದ್ರೆ, ಅದು ಅಮೆರಿಕಾ ಮಾತ್ರ.ಆದ್ರೆ ಈಗ, ಆ ಅಮೆರಿಕಾ ದೇಶದಲ್ಲಿ ದಿನಕ್ಕೊಂದು ಎಡವಟ್ಟು ಸೃಷ್ಟಿಯಾಗ್ತಾ ಇದೆ. ಅದರಲ್ಲೂ ಈಗ ಆಗ್ತಾ ಇರೋ ಬೆಳವಣಿಗೆ, ಅಮೆರಿಕಾದ ಸ್ಥಿತಿ ಅದೆಷ್ಟು ಘೋರವಾಗಿದೆ ಅನ್ನೋದನ್ನ ತೋರಿಸ್ತಾ ಇದೆ. ಅಷ್ಟೇ ಅಲ್ಲ, ಅಮೆರಿಕಾದ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಯಾಗೋ ಹಾಗೆ ಮಾಡಿದೆ.ನೀವು ಟ್ರಂಪ್ ಅರೆಸ್ಟ್ ಆದ್ರಾ ಅನ್ನೋ ಸುದ್ದಿನ ಕೇಳ್ತಾ ಇರೋದು, ಇದು ಎರಡನೇ ಸಲ. ಡೊನಾಲ್ಡ್ ಟ್ರಂಪ್ ಒಂದಲ್ಲಾ ಅಂತ ಎರಡೆರಡು ಬಾರಿ ಬಂಧನಕ್ಕೆ ಒಳಗಾಗೋ ಸನ್ನಿವೇಶ ಉಂಟಾಗಿದೆ. ಅದೂ ಕೂಡ, ಜಸ್ಟ್ ಮೂರು ತಿಂಗಳ ಗ್ಯಾಪ್‌ನಲ್ಲಿ ಎರಡು ಸಲ ಶಿಕ್ಷೆಗೆ ಗುರಿಯಾದ ಸಂಗತಿ, ಅಮೆರಿಕಾದಲ್ಲಿ ಸಂಚಲನ ಸೃಷ್ಟಿಸಿದೆ.

ಇದನ್ನೂ ವೀಕ್ಷಿಸಿ: ಕೇಸರಿ ಸೇನೆಯಲ್ಲಿ ಸೈನಿಕ ದಂಗೆ... ಟಾರ್ಗೆಟ್ ಯಾರು..?: "ಕೆಲ ನಾಯಕರಿಂದಲೇ ಬಿಜೆಪಿ ಮಣ್ಣು ತಿಂದಿದೆ"- ಪ್ರತಾಪ್ ಸಿಂಹ..!