ಕೇಸರಿ ಸೇನೆಯಲ್ಲಿ ಸೈನಿಕ ದಂಗೆ... ಟಾರ್ಗೆಟ್ ಯಾರು..?: "ಕೆಲ ನಾಯಕರಿಂದಲೇ ಬಿಜೆಪಿ ಮಣ್ಣು ತಿಂದಿದೆ"- ಪ್ರತಾಪ್ ಸಿಂಹ..!

"ರಾಜಿ ರಾಜಕಾರಣದಿಂದಲೇ ಬಿಜೆಪಿಗೆ ಸೋಲು" -ಸಿ.ಟಿ ರವಿ..!
ಬಿಜೆಪಿ Vs ಬಿಜೆಪಿ.. ಯಾದವೀ ಕಲಹದ ಗುಟ್ಟೇನು ಗೊತ್ತಾ..?
ಕೇಸರಿವೀರರ ಕಿಡಿ ಕಿಚ್ಚು, ರೋಷಾಗ್ನಿ ಜ್ವಾಲೆ ಯಾರ ವಿರುದ್ಧ..?

Share this Video
  • FB
  • Linkdin
  • Whatsapp

ಒಂದು ಚುನಾವಣೆ ಅಂದ್ಮೇಲೆ ಸೋಲು-ಗೆಲುವು ಸಹಜ. ಗೆದ್ದವರು ಬೀಗ್ತಾರೆ, ಸೋತವರು ನೆಲ ಕಚ್ತಾರೆ. ಹಾಗಂತ ಒಂದು ಸೋಲಿಗೆ ಎಲ್ಲವೂ ಮುಗೀತು ಅಂತ ಅರ್ಥ ಅಲ್ಲ. ಸೋಲಿಗೆ ಕಾರಣಗಳನ್ನು ಹುಡುಕಿ ಸರಿ ಪಡಿಸಿಕೊಳ್ಳೋದು ರಾಜಕೀಯ ಪಕ್ಷವೊಂದರ ಜಾಣ ನಡೆ. ಬಿಜೆಪಿಯಲ್ಲಿ ಅಂಥಾ ಆತ್ಮಾವಲೋಕನ ಸಭೆ ಕಳೆದ ವಾರ ನಡೆದಿದೆ. ಸಭೆಯ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ರಾಜಿ ರಾಜಕಾರಣದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕಾದ ವಿಚಾರವನ್ನು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಅದೇ ಬಗಲ್ ಮೇ ದುಷ್ಮನ್'ಗಳಂತೆ. ಹಾಗಾದ್ರೆ ಬಿಜೆಪಿಯವರೇ ಹೇಳ್ತಿರೋ ಬಿಜೆಪಿಯ ಆ ಹಿತಶತ್ರು ಯಾರು..?

ಇದನ್ನೂ ವೀಕ್ಷಿಸಿ: ಗೃಹಲಕ್ಷ್ಮೀ ನೋಂದಣಿ ಕಾರ್ಯ ನಾಳೆಯಿಂದ ಆರಂಭ: ಗೃಹಜ್ಯೋತಿ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

Related Video