ಟರ್ಕಿಯಲ್ಲಿ ಭೀಕರ ಪ್ರವಾಹ, 12ಕ್ಕೂ ಹೆಚ್ಚು ಮಂದಿ ಸಾವು..!
ಭೂಕಂಪಕ್ಕೆ ತತ್ತರಿಸಿದ್ದ ಟರ್ಕಿಯಲ್ಲಿ ಭೀಕರ ಪ್ರವಾಹ ಉಂಟಾಗಿದ್ದು ಮತ್ತೆ ಮತ್ತೆ ಸುನಾಮಿ ಭಯಕಾಣುತ್ತಿದೆ.
ಭಯಂಕರ ಭೂಕಂಪಕ್ಕೆ ತತ್ತರಿಸಿದ್ದ ಟರ್ಕಿಯಲ್ಲಿ ಇದೀಗ ರಣಚಂಡಿ ಪ್ರವಾಹಕ್ಕೆ ಜನ ಕೊಚ್ಚಿ ಹೋಗ್ತಿದ್ದಾರೆ.ಮತ್ತೊಂದೆಡೆ ಆಫ್ರಿಕಾದಲ್ಲಿ ಫ್ರೆಡ್ಡಿ ಸೈಕ್ಲೋನ್ ಆರ್ಭಟಕ್ಕೆ ಜನ ಬೆಚ್ಚಿ ಬಿದ್ದಿದ್ದು ಈವರೆಗೂ 400 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.. ಈ ಎಲ್ಲದರ ಮಧ್ಯೆ ನ್ಯೂಜಿಲ್ಯಾಂಡ್‌ನ ಉತ್ತರದಲ್ಲಿನ ಕೆರ್ಮಾಡೆಕ್ ಐಲ್ಯಾಂಡ್‌ಗಳಲ್ಲಿ ರಿಕ್ಟರ್ ಮಾಪನದಲ್ಲಿ 7.1 ತೀವ್ರತೆ ಪ್ರಬಲ ಭೂಕಂಪನ ಸಂಭವಿಸಿದೆ.ಪ್ರತಿ ವರ್ಷವೂ ನ್ಯೂಜಿಲ್ಯಾಂಡ್‌ನಲ್ಲಿ ಸಾವಿರಾರು ಭೂಕಂಪನಗಳು ಸಂಭವಿಸುತ್ತವೆ. ಕಳೆದ ಫೆಬ್ರವರಿಯಲ್ಲಿಯೂ ರಿಕ್ಟರ್ ಮಾಪನದಲ್ಲಿ 6.1 ತೀವ್ರತೆಯಲ್ಲಿ ಭೂಮಿ ನಡುಗಿತ್ತು. ವೆಲ್ಲಿಂಗ್ಟನ್ ಸಮೀಪದ ಲೋವರ್ ಹಟ್‌ನ 78 ಕಿಮೀ ದೂರದಲ್ಲಿ ಭೂಮಿ ನಡುಗಿತ್ತು.50 ಸಾವಿರಕ್ಕೂ ಅಧಿಕ ಜನರನ್ನು ಬಲಿ ಪಡೆದುಕೊಂಡ ಭೀಕರ ಭೂಕಂಪನದಿಂದ ಚೇತರಿಸಿಕೊಳ್ಳುವ ಮುನ್ನವೇ ಟರ್ಕಿಗೆ ಮತ್ತೊಂದು ಪ್ರಾಕೃತಿಕ ವಿಕೋಪ ಎದುರಾಗಿದೆ.