ಇಸ್ರೇಲ್ ಜೊತೆಯಲ್ಲಿ ಹಮಾಸ್ ಆಡ್ತಿರೋ ಆಟವೆಂಥದ್ದು..? ಭೂಸೇನೆಯನ್ನ ನುಗ್ಗಿಸೋಕೆ ಯಾಕೆ ಹಿಂದೇಟು..!

ಇಸ್ರೇಲ್ ಸೇನೆ ಮುಂದೆ ಸಾಲು ಸಾಲು ಸವಾಲುಗಳು
ಭೂಸೇನೆಯನ್ನ ನುಗ್ಗಿಸೋಕೆ ಯಾಕೆ ಹಿಂದೇಟು..!
ಇಸ್ರೇಲ್ ಜೊತೆ ಹಮಾಸ್ ಆಡ್ತಿರೋ ಆಟವೆಂಥದ್ದು..?

Share this Video
  • FB
  • Linkdin
  • Whatsapp

ಇಸ್ರೇಲ್ ಹಾಗೂ ಹಮಾಸ್ ಉಗ್ರರ ಸಂಘರ್ಷ ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣಿಸ್ತಾ ಇಲ್ಲ. ಇಸ್ರೇಲ್(Isreal) ದೇಶಕ್ಕೆ ಹಮಾಸ್ ಒಂದು ಲೆಕ್ಕವೇ ಅಲ್ಲ ಅನ್ನೋ ಥರದ ತಾಕತ್ತು ಇದ್ರೂ ಕೂಡ ಗಾಜಾ(Gaza) ಪಟ್ಟಿಯಲ್ಲಿ ಇಸ್ರೆಲ್ ಆಮೆ ವೇಗದಿಂದ ಕಾರ್ಯಾಚರಣೆ ಮಾಡ್ತಾ ಇದೆ. ಇಸ್ರೇಲ್ ಹಾಗೂ ಹಮಾಸ್(Hamas) ಸಂಘರ್ಷ ದಿನೇ ದಿನೇ ಹೆಚ್ಚಾಗ್ತಾ ಇದೆ. ಇಸ್ರೇಲ್ ದೇಶದ ಮೇಲೆ ರಾಕೆಟ್ ದಾಳಿ ಮಾಡಿದ ಹಮಾಸ್ ಉಗ್ರರು ಈಗ ಮಾಡಿದ್ದುಣ್ಣೋ ಮಹರಾಯಾ ಸ್ಥಿತಿಯಲ್ಲಿದೆ. ಯಾಕೆಂದ್ರೆ ಇಸ್ರೇಲ್ ಸೇನೆಯ ಪ್ರತಿದಾಳಿಯ ಸ್ವರೂಪ ಹಾಗಿದೆ. ಇಸ್ರೇಲ್ ಹಮಾಸ್ ಉಗ್ರರ ಅಡಗುದಾಣಗಳನ್ನ , ನೆಲೆಗಳನ್ನ ವಾರ ಒಪ್ಪತ್ತಿನ ಒಳಗೆ ಉಡೀಸ್ ಮಾಡಿ ಬಿಡುತ್ತೆ ಅಂತಲೇ ಎಲ್ಲಾ ಅಂದ್ಕೊಂಡಿದ್ರು.ಇಸ್ರೇಲ್ ದೇಶಕ್ಕಿರೋ ಶಕ್ತಿ ಅಂಥದ್ದು. ಹಮಾಸ್ ಉಗ್ರರು ಇಸ್ರೇಲ್ ಅಂತ ‘ಯುದ್ಧ ಚತುರ ದೇಶಕ್ಕೆ ದೊಡ್ಡ ಲೆಕ್ಕವೇ ಅಲ್ಲ. ಬಟ್ ಇಸ್ರೇಲ್ ತನ್ನ ಭೂ ಸೇನೆಯನ್ನ ಗಾಜಾ ಗಡಿಯೊಳಗೆ ನುಗ್ಗಿಸೋಕೆ ಹಿಂದೇಟು ಹಾಕ್ತಾ ಇದೆ. ಇದಕ್ಕೆ ಕಾರಣಗಳು ಅನೇಕ. ಜನನಿಬಿಡ ಪ್ಯಾಲೆಸ್ತೀನ್ ಪ್ರದೇಶದ ಮೇಲೆ ನಿರೀಕ್ಷಿತ ಭೂ ಆಕ್ರಮಣಕ್ಕಿಂತ ಮುಂಚಿತವಾಗಿ ಕಳೆದ 24 ಗಂಟೆಗಳಲ್ಲಿ ಇಸ್ರೇಲಿ ಭೂ ಸೈನ್ಯ ಗಾಜಾದ ಮೇಲೆ ದಾಳಿ ನಡೆಸಿದೆ ಎಂದು ಇಸ್ರೇಲ್ ಮಿಲಿಟರಿ ಶುಕ್ರವಾರ ತಿಳಿಸಿದೆ. ಆದ್ರೆ ಇದೊಂದು ದಾಳಿ ಇಸ್ರೇಲ್ ಸಾಮರ್ಥ್ಯಕ್ಕೆ ತಕ್ಕುದಲ್ಲಾ. ಹಮಾಸ್ ಉಗ್ರ ಬೇಟೆಗೆ ಇಳಿದಿರೋ ಇಸ್ರೇಲ್ ಅನೇಕ ಸಂದರ್ಭದಲ್ಲಿ ಹಿಂದೇಟಾಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದ ಮೊಸಾಬ್: ಕ್ರೈಸ್ತ್ರ ಧರ್ಮಕ್ಕೆ ಮತಾಂತರನಾಗಿದ್ದೇಕೆ..?

Related Video