ಅಮೆಜಾನ್ ಕಾಡಲ್ಲಿ 4 ಮಕ್ಕಳು.. 40 ದಿನ: ವಿಮಾನ ದುರಂತದಲ್ಲಿ ಇವರು ಬದುಕಿದ್ದೇ ಒಂದು ಪವಾಡ..!

40 ದಿನಗಳ ಕಾಲ ಮಕ್ಕಳು ಕಾಡಲ್ಲಿ ಬದುಕಿದ್ದು ಹೇಗೆ..? 
ಕೊಲಂಬಿಯಾ ಸೇನೆ ಮಕ್ಕಳನ್ನು ಪತ್ತೆ ಮಾಡಿದ್ದು ಹೇಗೆ..? 
ಮರದ ಎಲೆಗಳೇ ಹಾಸಿಗೆ.. ಕಾಡಿನ ಹಣ್ಣುಗಳೇ ಆಹಾರ

First Published Jun 12, 2023, 2:47 PM IST | Last Updated Jun 12, 2023, 2:47 PM IST

ಇದನ್ನು ಪವಾಡದ ಕಥೆ ಎಂದು ಹೇಳಿದ್ರೂ ಅಚ್ಚರಿಯಿಲ್ಲ ಬಿಡಿ. ನೀವು ಇಲ್ಲಿವರೆಗೂ ಅದೆಷ್ಟೋ ಪವಾಡ ಕಥೆಗಳನ್ನು ಕೇಳಿರಬಹುದು. ಆದ್ರೆ, ನಾವಿಂದು ಹೇಳ್ತಿರುವ 4 ಮಕ್ಕಳ ಪವಾಡ ಕಥೆಯನ್ನು ಈ ಹಿಂದೆ ಕೇಳಿರಲಿಕ್ಕೆ ಸಾಧ್ಯವೇ ಇಲ್ಲ. ಜಗತ್ತಿನಲ್ಲಿ ಅಮೆಜಾನ್ ಕಾಡೆಂದ್ರೆ ಎಷ್ಟು ಭಯಾನಕ ಅನ್ನೋದು ಸಾಮಾನ್ಯವಾಗಿ ಎಲ್ರಿಗೂ ಗೊತ್ತಿರುತ್ತೆ. ಅಮೆಜಾನ್ ಕಾಡು ತನ್ನೊಡಳೊಗೆ ಅದೆಷ್ಟೋ ಭಯಂಕರ ಪ್ರಾಣಿಸಂಕುಲವನ್ನು ಹೊಂದಿದೆ. ಈ ಕಾಡಿನೊಳಗೆ ಮನುಷ್ಯನೇನಾದ್ರು ಎಂಟ್ರಿ ಕೊಟ್ರೆ, ಆತನ ಸ್ಥತಿ ಏನೆಲ್ಲ ಆಗುತ್ತೆ ಅನ್ನೋದರ ಕುರಿತು ಹಾಲಿವುಡ್‌ನಿಂದ ಹತ್ತಾರು ಸಿನಿಮಾಗಳು ಬಂದು ಬಿಟ್ಟಿವೆ. ಆದ್ರೆ, ಇಲ್ಲಿವರೆಗೂ ಬಂದಿರೋ ಎಲ್ಲ ಅಮೆಜಾನ್ ಹಾರರ್ ಸಿನಿಮಾಗಳನ್ನೂ ಮೀರಿಸುವಂತ, ಸಿನಿಮಾಗಳಿಗಿಂತವೂ ಭಯ ಹುಟ್ಟಿಸುವ ರಿಯಲ್ ಸ್ಟೋರಿಯೊಂದು ನಡೆದು ಹೋಗಿದೆ. ನಾಲ್ಕು ಮಕ್ಕಳು ಬದುಕುಳಿದಿದ್ದು ಪವಾಡ ಶಕ್ತಿಯನ್ನು ನಂಬುವವರಿಗೂ ಅಚ್ಚರಿಯನ್ನುಂಟು ಮಾಡಿದೆ. ಈ ದಟ್ಟಾರಣ್ಯದಲ್ಲಿ 40 ದಿನಗಳ ಕಾಲ ಬದುಕಿಗಾಗಿ ಹೋರಾಡಿದ ನಾಲ್ವರು ಒಂದೇ ಕುಟುಂಬದ ಮಕ್ಕಳಾಗಿದ್ದರು. 

ಇದನ್ನೂ ವೀಕ್ಷಿಸಿ: ಮಹಾಕಾಳನಿಗೆ ಡಿಕೆಶಿ ಭಸ್ಮಾರತಿ ಸಮರ್ಪಣೆ: ಡಿಸಿಎಂ ಉಜ್ಜಯಿನಿ ಭೇಟಿ ಹಿಂದೆ ಇರುವ ರಹಸ್ಯವೇನು ?

Video Top Stories