
ಮಹಾಕಾಳನಿಗೆ ಡಿಕೆಶಿ ಭಸ್ಮಾರತಿ ಸಮರ್ಪಣೆ: ಡಿಸಿಎಂ ಉಜ್ಜಯಿನಿ ಭೇಟಿ ಹಿಂದೆ ಇರುವ ರಹಸ್ಯವೇನು ?
ಮಹಾಕಾಳೇಶ್ವರ ಜ್ಯೋತಿರ್ಲಿಂಗ ಸನ್ನಿಧಾನದಲ್ಲಿ ಡಿಸಿಎಂ ಡಿಕೆ..!
ಭಸ್ಮಾರತಿ.. ಬಗಳಾಮುಖಿ.. ಪೀತಾಂಬರ ಪೀಠ.. ರಾಜಯೋಗ..!
ಬಗಳಾಮುಖಿ ಶತ್ರುಸ್ತಂಭಿನಿಯ ಸಾನಿಧ್ಯದಲ್ಲಿ ಕನಕಪುರ ಬಂಡೆ..!
ಡಿಕೆ ಶಿವಕುಮಾರ್ ಸರ್ಕಾರ ರಚನೆ ಆದಾಗಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನ ಜಾರಿ ಮಾಡೋ ಒತ್ತಡ ಒಂದು ಕಡೆ.. ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸೋ ಜವಾಬ್ದಾರಿ ಇನ್ನೊಂದು ಕಡೆ . ಈ ಮಧ್ಯೆ ಡಿಕೆಶಿ ಸಮಯ ಮಾಡಿಕೊಂಡು ಮಹಾಕಾಳೇಶ್ವರ ಜ್ಯೋತರ್ಲಿಂಗಕ್ಕೆ ಹೋಗಿದ್ದಾರೆ. ಒಂದು ಕಡೆ ಮಹಾಕಾಲನ ಸನ್ನಿಧಿ ಮತ್ತೊಂದು ಕಡೆ ಶತ್ರುಸ್ತಂಭಿನಿ ಬಗಳಾಮುಖಿ ಇನ್ನೊಂದ್ಕಡೆ ಪೀತಾಂಬರ ಪೀಠ, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರೋ ಈ ಮೂರು ಶಕ್ತಿ ಸನ್ನಿಧಾನಕ್ಕೆ ಕನಕಪುರ ಬಂಡೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೋಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಕರ್ನಾಟಕ ಡಿಸಿಎಂ ಜೊತೆ ರಾಜ್ ಕುಟುಂಬ: ಕುತೂಹಲ ಮೂಡಿಸಿದ ಡಿಕೆಶಿ- ದೊಡ್ಮನೆ ಕುಟುಂಬದ ಭೇಟಿ !