
ಭಾರತದ ಅತ್ಯಂತ ಶ್ರೀಮಂತ ಮಹಿಳೆಯರು ಯಾರೆಲ್ಲಾ ?
ವಯಸ್ಸು 40. ಆದ್ರೆ 82 ಸಾವಿರ ಕೋಟಿಯ ಮಹಾರಾಣಿ. 10 ಸಾವಿರದಿಂದ ಶುರು ಮಾಡಿ ಇಂದು ಕೋಟ್ಯಾಧಿಪತಿ ಆದವರೂ ಇದ್ದಾರೆ. ಭಾರತದ ಶ್ರೀಮಂತ ಮಹಿಳೆಯರು ಯಾರೆಲ್ಲಾ ? ಇಲ್ಲಿದೆ ಮಾಹಿತಿ.
ಕಾಲ ಬದಲಾಗಿದೆ. ಮಹಿಳೆಯರು ಭಯಪಟ್ಟು ಮನೆಯೊಳಗೆ ಕೂರುವ ಪರಿಸ್ಥಿತಿ ಈಗಿಲ್ಲ. ವಿದ್ಯಾಭ್ಯಾಸ, ಶಿಕ್ಷಣ, ಉದ್ಯೋಗ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರಿದ್ದಾರೆ. ಪುರುಷರಿಗೆ (Men) ಸಮಾನವಾಗಿ ಎಲ್ಲಾ ಕ್ಷೇತ್ರದಲ್ಲೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ಮಾತ್ರವಲ್ಲ ಉದ್ಯಮದಲ್ಲೂ ಮಹಿಳೆಯರು ಮಿಂಚುತ್ತಿದ್ದಾರೆ. ಪುರುಷರಿಗೆ ನಾವ್ಯಾವ ರೀತಿಯಲ್ಲೂ ಎಂಬ ರೀತಿ ಸಾಧನೆ ಮಾಡಿ ದೇಶದ ಆರ್ಥಿಕತೆಗೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಭಾರತದ ಶ್ರೀಮಂತ ಮಹಿಳೆಯರ ಯಶಸ್ಸಿನ ಸೀಕ್ರೆಟ್ ಏನು..? ಇತ್ತೀಚಿಗೆ ಕೊಟಕ್ ಖಾಸಗಿ ಬ್ಯಾಂಕಿಂಗ್ ಭಾರತದ ನೂರು ಶ್ರೀಮಂತ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಭಾರತದ ಶ್ರೀಮಂತ ಮಹಿಳೆಯರು ಯಾರೆಲ್ಲಾ ?
ಹೆಚ್‌ಸಿಎಲ್ ಟೆಕ್ನಾಲಜೀಸ್‌ನ ಮುಖ್ಯಸ್ಥೆ ರೋಶಿನಿ ನಾಡಾರ್ ಮಲ್ಹೋತ್ರಾ, ದೇಶದ ಅತ್ಯಂತ ಶ್ರೀಮಂತ ಮಹಿಳೆ (Richest Woman) ಯೆಂಬ ಹೆಗ್ಗಳಿಕೆ ಭಾಜನರಾಗಿದ್ದಾರೆ. ಭಾರತದ ಐಟಿ ಕಂಪೆನಿಯನ್ನು ಮುನ್ನಡೆಸುತ್ತಿರುವ ಮೊದಲ ಮಹಿಳೆ ಇವರು. ಇವರ ಒಟ್ಟು ಆಸ್ತಿ 84330 ಕೋಟಿ. ವಿಶ್ವದ ಶ್ರೀಮಂತ ಮಹಿಳೆಯರ ಪಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿ ನಯ್ಕಾ ಮುಖ್ಯಸ್ಥೆ ಫಲ್ಗುಣಿ ನಾಯರ್ ಇದ್ದಾರೆ. ಒಟ್ಟು ಆಸ್ತಿ 57,520 ಕೋಟಿ ರೂ. ಆಗಿದೆ.
ಏಷ್ಯಾದ ಶ್ರೀಮಂತ ಪುರುಷ ಮಾತ್ರವಲ್ಲ, ಮಹಿಳೆ ಕೂಡ ಭಾರತೀಯರೆ;ಹುಯಿಯಾನ್ ಹಿಂದಿಕ್ಕಿದ ಸಾವಿತ್ರಿ ಜಿಂದಾಲ್
ಮೂರನೇ ಸ್ಥಾನದಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ವಜುಂದಾರ್ ಶಾ ಇದ್ದು, ಇವರ ಒಟ್ಟು ಆಸ್ತಿ 29,030 ರೂ. ಕೋಟಿ, ನಾಲ್ಕನೇ ಸ್ಥಾನದಲ್ಲಿ ದಿವೀಸ್ ಲ್ಯಾಬೋರೇಟರೀಸ್ ನಿರ್ದೇಶಕಿ ನೀಲಮಾ ಮೋಟಪರ್ತಿಯಿದ್ದಾರೆ. ಇವರ ಒಟ್ಟು ಆಸ್ತಿ 27,170 ಕೋಟಿ. ಐದನೇ ಸ್ಥಾನದಲ್ಲಿ ಝೋಹೋ ಕಂಪೆನಿ ಪ್ರೊಡಕ್ಷನ್ ಮ್ಯಾನೇಜರ್ ರಾಧಾ ವೆಂಬು ಇದ್ದು, ಇವರ ಒಟ್ಟು ಆಸ್ತಿ 26.260 ಕೋಟಿ ರೂ. ಆಗಿದೆ.