ವಾಟ್ಸಾಪ್ ಹೊಸ ನಿಯಮ, ಒಪ್ಪದಿದ್ರೆ App ಬ್ಲಾಕ್!

ಹೊಸ ನಿಯಮ ಒಪ್ಪದಿದ್ದರೆ, ನಿಮ್ಮ ವಾಟ್ಸಾಪ್ ಕಾರ್ಯ ನಿರ್ವಹಿಸುವುದಿಲ್ಲ. ಡಿಜಿಟಲ್ ದುನಿಯಾ ದಿಗ್ಗಜನ ಈ ನೂತನ ನಿಯಮ ಭಯ ಹುಟ್ಟಿಸಿದ್ದೇಕೆ? ಪ್ರೈವೆಸಿ ಪಾಲಿಸಿ ಒಪ್ಪಿಕೊಂಡರೆ ತಾನೇ ತಾನಾಗಿ ಡಿಲೀಟ್ ಆಗ್ತವಾ ನಿಗೂಢ ಸಂದೇಶಗಳು? 

Share this Video
  • FB
  • Linkdin
  • Whatsapp

ನವದೆಹಲಿ(ಮಾ.11): ಹೊಸ ನಿಯಮ ಒಪ್ಪದಿದ್ದರೆ, ನಿಮ್ಮ ವಾಟ್ಸಾಪ್ ಕಾರ್ಯ ನಿರ್ವಹಿಸುವುದಿಲ್ಲ. ಡಿಜಿಟಲ್ ದುನಿಯಾ ದಿಗ್ಗಜನ ಈ ನೂತನ ನಿಯಮ ಭಯ ಹುಟ್ಟಿಸಿದ್ದೇಕೆ? ಪ್ರೈವೇಸಿ ಪಾಲಿಸಿ ಒಪ್ಪಿಕೊಂಡರೆ ತಾನೇ ತಾನಾಗಿ ಡಿಲೀಟ್ ಆಗ್ತವಾ ನಿಗೂಢ ಸಂದೇಶಗಳು? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಳಕೆದಾರರ ಮಾಹಿತಿ ಸಂಗ್ರಹ ಮತ್ತು ಅದನ್ನು ಇತರರ ಜೊತೆ ಹಂಚಿಕೊಳ್ಳುವ ಕುರಿತ ತನ್ನ ಹೊಸ ನೀತಿಯ ಕುರಿತು ವಾಟ್ಸಾಪ್‌ ಸಂಸ್ಥೆ ಮತ್ತೆ ಗ್ರಾಹಕರಿಗೆ ಸಂದೇಶ ರವಾನಿಸಲು ಆರಂಭಿಸಿದೆ. ಒಂದು ವೇಳೆ ಗ್ರಾಹಕರು ಈ ಹೊಸ ಖಾಸಗಿ ನೀತಿ ಒಪ್ಪದೇ ಹೋದಲ್ಲಿ ಮೇ 15ರಿಂದ ಮೊಬೈಲ್‌ನಲ್ಲಿ ವಾಟ್ಸಾಪ್‌ ಸೇವೆಗಳು ಸ್ಥಗಿತಗೊಳ್ಳಲಿದೆ ಎಂದು ಅದು ಮಾಹಿತಿ ನೀಡಿದೆ.

ಮತ್ತೆ ಕ್ಯಾತೆ: ಹೊಸ ನೀತಿ ಒಪ್ಪದಿದ್ದರೆ ಮೇ.15ರಿಂದ ವಾಟ್ಸಾಪ್‌ ‘ಬಂದ್‌’!

ಬಳಕೆದಾರರ ಮಾಹಿತಿಯನ್ನು, ತನ್ನ ಇತರೆ ಜಾಲತಾಣಗಳಿಗೆ ಮತ್ತು ಉದ್ಯಮಗಳ ಜೊತೆ ಹಂಚಿಕೊಳ್ಳುವ ಹೊಸ ನೀತಿಯೊಂದರ ಜಾರಿಗೆ ವಾಟ್ಸಾಪ್‌ನ ಮಾತೃಸಂಸ್ಥೆ ಫೇಸ್‌ಬುಕ್‌ ಮುಂದಾಗಿದೆ. ಫೆ.8ರಿಂದಲೇ ಈ ನೀತಿ ಜಾರಿಯಾಗಬೇಕಿತ್ತಾದರೂ, ಬಳಕೆದಾರರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಅದು ನೀತಿ ಜಾರಿಯನ್ನು ಮೇ 15ಕ್ಕೆ ಮುಂದೂಡಿತ್ತು. ಇದೀಗ ಆ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಾಟ್ಸಾಪ್‌ ಸಂಸ್ಥೆಯು ನೇರವಾಗಿ ಬಳಕೆದಾರರ ಮೊಬೈಲ್‌ಗಳಿಗೆ ಮತ್ತು ಟ್ವೀಟರ್‌ ಮೂಲಕ ಮಾಹಿತಿ ರವಾನಿಸುವ ಮೂಲಕ, ಗಡುವು ಸಮೀಪಿಸುತ್ತಿರುವ ಕುರಿತು ಜ್ಞಾಪಕ ಮಾಡುವ ಕೆಲಸ ಮಾಡಿದೆ.

Related Video