Asianet Suvarna News Asianet Suvarna News

weekly horoscope: ಈ ವಾರ ತುಳಸಿ ಹಬ್ಬವಿದ್ದು, ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
 

ಈ ವಾರದ ಒಂದೊಳ್ಳೆ ಮಾತೆಂದರೇ, ವ್ಯೆಥೆಪಡಲು ಭಯಪಡಲು ಸಾವಿರಾರು ವಿಷಯಗಳು, ಸಂದರ್ಭಗಳು ಸಿಗುತ್ತವೆ ಪ್ರತಿದಿವಸ. ಆದರೆ ಅವು ಮೂಢನಿಗೆ ಮಾತ್ರ. ಪಂಡಿತನಿಗಲ್ಲ ಎಂಬುದಾಗಿದೆ. ಈ ವಾರದ ವಿಶೇಷ ನೋಡೋದಾದ್ರೆ, ನವೆಂಬರ್ 20 ರಂದು ಕಾರ್ತೀಕ ಸೋಮವಾರವಾಗಿದೆ. ನವೆಂಬರ್ 24 ಶುಕ್ರವಾರ ಉತ್ಥಾನ ದ್ವಾದಶಿ, ತುಳಸಿ ಹಬ್ಬ ಇದೆ. ವೃಷಭ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಅನುಕೂಲವಿದ್ದು, ಲಾಭಗಳಿಕೆಯ ದಿನವಾಗಿದೆ. ಮಾನಸಿಕ ಒತ್ತಡಕ್ಕೆ ಸಿಲುಕುವಿರಿ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ.ವಾರದ ಮಧ್ಯದಲ್ಲಿ ವೃತ್ತಿಯಲ್ಲಿ ಅನುಕೂಲವಿದ್ದು, ಮಾನಸಿಕ ಕ್ಲೇಶ, ವಸ್ತು ನಷ್ಟತೆ, ವ್ಯಾಪಾರಿಗಳಿಗೆ ಅನುಕೂಲವಿದೆ. ವಾರಾಂತ್ಯದಲ್ಲಿ 
ವೃತ್ತಿಯಲ್ಲಿ ಅನುಕೂಲವಿದ್ದು, ಅಧಿಕ ಧನಲಾಭ, ಶುಭ ಕಾರ್ಯಗಳಿಗೆ ಹಣ ವಿನಿಯೋಗ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ. ಪರಿಹಾರಕ್ಕೆ ವಿಷ್ಣು ಸನ್ನಿಧಾನಕ್ಕೆ ಗೋಧಿ-ಹೆಸರುಬೇಳೆ ದಾನ ಮಾಡಿ.

ಇದನ್ನೂ ವೀಕ್ಷಿಸಿ:  ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇನೆಂದ ನಟಿ: ಪೂನಂ ನಂತರ ರೇಖಾ ಬೊಜ್ ಪ್ರಚಾರಕ್ಕಾಗಿ ಗಿಮಿಕ್ !

Video Top Stories