Weekly Horoscope: ಈ ವಾರದ ವಿಶೇಷ ಏನು ? ಇಂದಿನಿಂದ ಧನುರ್ಮಾಸ ಆರಂಭ, ಏನೆಲ್ಲಾ ಮಾಡಬೇಕು ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

First Published Dec 17, 2023, 11:19 AM IST | Last Updated Dec 17, 2023, 11:19 AM IST

ವಾರದ ವಿಶೇಷ ಎಂದರೇ, ಡಿಸೆಂಬರ್ 17ರಂದು ಭಾನುವಾರ ನಾಗ ಪೂಜೆ, ಧನುರ್ಮಾಸ ಪ್ರಾರಂಭವಾಗಲಿದೆ. ಡಿಸೆಂಬರ್ 18 ಅಂದರೆ ಸೋಮವಾರ  ಸ್ಕಂದ ಷಷ್ಠೀ ಇದೆ. ಡಿಸೆಂಬರ್ 22 ರಂದು ಶುಕ್ರವಾರ ಗೀತಾ ಜಯಂತಿ ಇದೆ. ಡಿಸೆಂಬರ್ 23 ಶನಿವಾರ ವೈಕುಂಠ ಏಕಾದಶಿ ಇದೆ. ಮಿಥುನ ರಾಶಿಯವರಿಗೆ ಈ ವಾರದ ಆದಿಯಲ್ಲಿ ಲಾಭವನ್ನು ಕಾಣುತ್ತೀರಿ. ವೃತ್ತಿಯಲ್ಲಿ ಸ್ವಲ್ಪ ಕಿರಿಕಿರಿ. ಕುಟುಂಬದವರ ಸಹಕಾರ ಇರಲಿದೆ. ದೇವತಾಕಾರ್ಯಗಳಲ್ಲಿ ಭಾಗಿ ಮನಸ್ಸಿಗೆ ಸಮಾಧಾನ ಇರಲಿದೆ. ವಾರ ಮಧ್ಯದಲ್ಲಿ ವೃತ್ತಿಯಲ್ಲಿ ಮನಸ್ತಾಪಗಳು. ಸ್ತ್ರೀಯರಿಗೆ ಕಿರಿಕಿರಿ, ಲಾಭಗಳಿಸುತ್ತೀರಿ, ಸಂಗಾತಿಯ ಸಹಕಾರ ಪ್ರಯಾಣದಲ್ಲಿ ಸೌಖ್ಯವಿರಲಿದೆ. ವಾರಾಂತ್ಯದಲ್ಲಿ ಹೆಚ್ಚಿನ ಲಾಭಗಳಿಕೆ. ಹಿರಿಯರಿಂದ ಸಹಕಾರ. ವೃತ್ತಿಯಲ್ಲಿ ಅನುಕೂಲ. ವಿದ್ಯಾರ್ಥಿಗಳಿಗೆ ಅನುಕೂಲ. ದಾಂಪತ್ಯದಲ್ಲಿ ಅಸಮಾಧಾನ. ಪರಿಹಾರಕ್ಕೆ ಲಕ್ಷ್ಮೀನಾರಾಯಣ ಹೃದಯ ಪಠಿಸಿ.

ಇದನ್ನೂ ವೀಕ್ಷಿಸಿ:  10 ಕೋಟಿ ಆಫರ್ ರಿಜೆಕ್ಟ್ ಮಾಡಿದ ಅಲ್ಲು ಅರ್ಜುನ್: ಎಷ್ಟು ಕೋಟಿ ಕೊಟ್ರು ನಾನು ಅದನೆಲ್ಲಾ ಮಾಡಲ್ಲ ಎಂದ ನಟ