10 ಕೋಟಿ ಆಫರ್ ರಿಜೆಕ್ಟ್ ಮಾಡಿದ ಅಲ್ಲು ಅರ್ಜುನ್: ಎಷ್ಟು ಕೋಟಿ ಕೊಟ್ರು ನಾನು ಅದನೆಲ್ಲಾ ಮಾಡಲ್ಲ ಎಂದ ನಟ
ಜನಪ್ರಿಯ ಲಿಕ್ಕರ್ ಮತ್ತು ಪಾನ್ ಬ್ರಾಂಡ್ ಕಂಪನಿಯೊಂದರ 10 ಕೋಟಿ ಆಫರ್‌ನನ್ನು ನಟ ಅಲ್ಲು ಅರ್ಜುನ್ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ನಟ ಅಲ್ಲು ಅರ್ಜುನ್(Allu Arjun) 10 ಕೋಟಿ ಆಫರ್‌ನನ್ನು ರಿಜೆಕ್ಟ್ ಮಾಡಿದ್ದಾರಂತೆ. ಈ ರೀತಿ ಒಂದು ಸುದ್ದಿ ಫುಲ್ ವೈರಲ್ ಆಗಿದೆ. ಪುಷ್ಪ ಸಿನಿಮಾದಲ್ಲಿ ಮದ್ಯಪಾನ , ಧೂಮಪಾನ ಮತ್ತು ಪಾನ್ ಜಗಿಯುವ ಎಲ್ಲಾ ದೃಶ್ಯಗಳು ಇವೆ. ಹೀಗಾಗಿ ಜನಪ್ರಿಯ ಲಿಕ್ಕರ್ ಮತ್ತು ಪಾನ್ ಬ್ರಾಂಡ್ ಕಂಪನಿಯೊಂದು(Liquor and Pan Brand) ಬ್ರಾಂಡ್‌ನ ಲೋಗೋವನ್ನು ಪ್ರದರ್ಶಿಸಲು ನಟನಿಗೆ ಆಫರ್ ನೀಡಿದೆ. ಆದ್ರೆ ನಟ ಅಲ್ಲು ಅರ್ಜುನ್ ಈ ಆಫರ್‌ನನ್ನು ತಿರಸ್ಕರಿಸಿದ್ದಾರೆ. ಸಿನಿಮಾದ ಹೀರೋ ಕುಡಿಯುವ , ಸಿಗರೇಟು ಸೇದುವ, ಪಾನ್ ಮಸಾಲ ಜಗಿಯುವ ಸಂದರ್ಭದಲ್ಲಿ ತಮ್ಮ ಬ್ರಾಂಡ್ ಹೆಸರು ಎಲ್ಲಾದರೂ ಕಾಣಿಸುವಂತೆ ಮಾಡುವ ಬೇಡಿಕೆಯನ್ನು ಇಟ್ಟಿದೆ. ಆದರೆ, ಈ ಆಫರ್‌ಗೆ ಅಲ್ಲು ಅರ್ಜುನ್ ನೋ ಎಂದಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ವೀಕ್ಷಿಸಿ: ಡಾಲಿ ಹೊಸ ಸಿನಿಮಾ 'ಅಣ್ಣ From Mexico': ಮತ್ತೆ ಒಂದಾದ ಬಡವ ರಾಸ್ಕಲ್ ಚಿತ್ರತಂಡ..!