
ಶಿವರಾಜ್‌ಕುಮಾರ್ ಸೇಫ್ ಆಗಿದ್ದರ ಹಿಂದಿದೆ ರೋಚಕ ಕತೆ!
ಗಾಡ್ ಆಫ್ ಮಾಸ್ ಶಿವಣ್ಣ ಬೆಂಗಳೂರಿಗೆ ಹೊರಡಲು ಸಜ್ಜಾಗುತ್ತಿದ್ದಾರೆ. ಜನವರಿ 25ಕ್ಕೆ ಬೆಂಗಳೂರಿನ ನಾಗವಾರದಲ್ಲಿರೋ ತನ್ನ ಮನೆ ಸೇರಿಕೊಳ್ಳುತ್ತಿದ್ದಾರೆ. ಅಮೇರಿಕದ ಮಿಯಾಮಿಯಲ್ಲಿ ಶಸ್ತ್ರ ಚಿಕಿತ್ಸೆ ಪಡೆದು ಕ್ಯಾನ್ಸರ್ ಗೆದ್ದಿರೋ ಶಿವಣ್ಣನಿಗೆ 6 ಆಪರೇಷನ್ 190 ಹೊಲಿಗೆ ಹಾಕಿದ್ದಾರೆ. ಇಷ್ಟೊಂದು ದೊಡ್ಡ ಶಸ್ತ್ರ ಚಿಕಿತ್ಸೆಗೆ ಒಳಗಾಗಿರೋ ಶಿವಣ್ಣ ವೈಧ್ಯ ಲೋಕಕ್ಕೆ ಸವಾಲ್ ಹಾಕಿದ್ದಾರೆ. ಶಿವಣ್ಣನ ಆಪರೇಷನ್ ರಹಸ್ಯದ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ.
ಶಿವಣ್ಣನಿಗೆ ವಯಸ್ಸು 62. ಆದ್ರೆ ಅದೇ ಹಳೇಯ ಆನಂದ್ನಲ್ಲಿದ್ದ ಎನರ್ಜಿ, ಜೋಶ್ ಇಂದಿಗೂ ಇದೆ. ಕ್ಯಾನ್ಸರ್ ಆಪರೇಷನ್ ಆದ್ರೂ ಒಂದ್ ಚೂರು ಎದೆಗುಂದದೇ ಜೆಸ್ಟ್ ವಿಲ್ ಪವರ್ನಿಂದ ಎದ್ದು ನಿಂತಿದ್ದಾರೆ. ಈ ಮೂಲಕ ಕೋಟ್ಯಂತರ ಅಭಿಮಾನಿಗಳ ಹರಕೆ-ಹಾರೈಕೆ ಫಲಿಸಿದೆ.