ಮಚ್ಚು ರೀಲ್ಸ್ ಮಾಡಿದ್ದ ಜೋಡಿಯಲ್ಲಿ ವಿನಯ್ ಬಚಾವ್ ಆಗಿ ರಜತ್‌ ಮಾತ್ರ ಜೈಲು ಸೇರಿದ್ದೇಕೆ?

ಪರಪ್ಪನ ಅಗ್ರಹಾರ ಸೇರಿದ್ದ ದಾಸನ ಶಿಷ್ಯಂದಿರು ಕೊನೆಗೆ ಬೇಲ್ ಪಡೆದು ಹೊರಬಂದಿದ್ರು. ಮತ್ತೆ ಮೊದಲಿನಂತೆ ಟೆಲಿವಿಷನ್ ಶೋನಲ್ಲಿ ಭಾಗಿಯಾಗೋದಕ್ಕೆ ಶುರುಮಾಡಿದ್ರು. ಆದ್ರೆ ಕೋರ್ಟ್ ಜಾಮೀನು ಕೊಟ್ಟಿದೆ ಅಂದ್ರೆ ಅದರ ಜೊತೆಗೆ ಒಂದಿಷ್ಟು ಷರತ್ತುಗಳನ್ನ ವಿಧಿಸಿರುತ್ತೆ. ಅದರ ಅರಿವೇ ಇಲ್ಲದೇ ..

Share this Video
  • FB
  • Linkdin
  • Whatsapp

ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿದ್ದ ದಾಸನ ಶಿಷ್ಯ ರಜತ್ ಬೇಲ್ ಮೇಲೆ ಹೊರ ಬಂದಿದ್ದ. ಜೈಲು ಸೇರಿ ಬಂದರೂ ಬುದ್ದಿ ಕಲಿಯದ ಬುಜ್ಜಿನ ಮತ್ತೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜಾಮೀನು ಷರತ್ತು ಉಲ್ಲಂಘಿಸಿದ ರಜತ್​​ನ ಅರೆಸ್ಟ್ ಮಾಡಿ ಕೋರ್ಟ್​ಗೆ ಹಾಜರು ಪಡಿಸಿದ್ರು. ಕೋರ್ಟ್ ಈ ಮಚ್ಚೇಶ್ವರನ ಬೇಲ್ ರದ್ದು ಮಾಡಿ ಜೈಲಿಗಟ್ಟಿದೆ.

ಯೆಸ್ ಬಿಗ್ ಬಾಸ್ ಮನೆಯ ಬ್ಯಾಡ್ ಬಾಯ್ ರಜತ್ ಮತ್ತೆ ಜೈಲು ಪಾಲಾಗಿದ್ದಾನೆ. ಈ ಹಿಂದೆ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಆರೋಪದ ಮೇಲೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಪೊಲೀಸರು ರಜತ್ ಮತ್ತು ವಿನಯ್ ಗೌಡರನ್ನ ಬಂಧಿಸಿ ಜೈಲಿಗಟ್ಟಿದ್ರು.

ಪರಪ್ಪನ ಅಗ್ರಹಾರ ಸೇರಿದ್ದ ದಾಸನ ಶಿಷ್ಯಂದಿರು ಕೊನೆಗೆ ಬೇಲ್ ಪಡೆದು ಹೊರಬಂದಿದ್ರು. ಮತ್ತೆ ಮೊದಲಿನಂತೆ ಟೆಲಿವಿಷನ್ ಶೋನಲ್ಲಿ ಭಾಗಿಯಾಗೋದಕ್ಕೆ ಶುರುಮಾಡಿದ್ರು. ಆದ್ರೆ ಕೋರ್ಟ್ ಜಾಮೀನು ಕೊಟ್ಟಿದೆ ಅಂದ್ರೆ ಅದರ ಜೊತೆಗೆ ಒಂದಿಷ್ಟು ಷರತ್ತುಗಳನ್ನ ವಿಧಿಸಿರುತ್ತೆ. ಅದರ ಅರಿವೇ ಇಲ್ಲದೇ ತಮ್ಮ ಕೇಸ್ ಖುಲಾಸೆಯೇ ಆಗೋಯ್ತು ಅಂತ ಮೆರೀತಾ ಇದ್ದವರಿಗೆ ಕೋರ್ಟ್ ಶಾಕ್ ಕೊಟ್ಟಿದೆ.

ಊರ್ಮಿಳಾ ಹೆಸರನ್ನು ಮಗಳಿಗೆ ಇಟ್ಟಿದ್ದೇಕೆ ಶ್ರೀದೇವಿ..? ಆದ್ರೆ 'ತಾಯಿಗೆ ತಕ್ಕ ಮಗಳಲ್ಲ' ಅನ್ನೋದ್ಯಾಕೆ?

ಬೇಲ್ ಕೊಡೋವಾಗ ಪ್ರತಿಬಾರಿ ವಿಚಾರಣೆಗೆ ಹಾಜರಾಗಬೇಕು ಅಂತ ಕೋರ್ಟ್ ಷರತ್ತು ವಿಧಿಸಿತ್ತು. ಆದ್ರೆ ರಜತ್ ಮೊದಲ ಹಿಯರಿಂಗ್​​ಗೇನೇ ಗೈರು ಹಾಜರಾಗಿದ್ದ. ನನಗೆ ಶೂಟಿಂಗ್ ಇದೆ ಕೋರ್ಟ್​ಗೆ ಬರೋದಕ್ಕೆ ಆಗ್ತಾ ಇಲ್ಲ ನೆಪ ಹೇಳಿದ್ದ.. ಇದನ್ನ ಕೇಳಿ ಗರಂ ಆಗಿದ್ದ ನ್ಯಾಯಾದೀಶರು ಈತನ ಬೇಲ್ ರದ್ದು ಮಾಡಿ, ಬಂಧನಕ್ಕೆ ವಾರೆಂಟ್ ಹೊರಡಿಸಿದ್ರು.

ಇವತ್ತು ಬಸವೇಶ್ವರ ನಗರ ಪೊಲೀಸರು ರಜತ್​ನ ಅರೆಸ್ಟ್ ಮಾಡಿ ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸಿತು. ರಜತ್​ಗೆ ಛೀಮಾರಿ ಹಾಕಿದ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ. ಅಲ್ಲಿಗೆ ಮಚ್ಚೇಶ್ವರ ಮತ್ತೆ ಕಂಬಿ ಹಿಂದೆ ಶಿಪ್ಟ್ ಆಗಿದ್ದಾನೆ.

ಇನ್ನೂ ರಜತ್​ನ ರೀಲ್ಸ್ ಪಾರ್ಟನರ್ ವಿನಯ್ ಗೌಡ ಕೂಡ ಅರೆಸ್ಟ್ ಆಗಬೇಕಿತ್ತು. ಆದ್ರೆ ಕೋರ್ಟ್​ಗೆ ಹಾಜರಾಗಿ ವಕೀಲರ ಮೂಲಕ ವಾರೆಂಟ್ ರಿಕಾಲ್​ಗೆ ಮನವಿ ಸಲ್ಲಿಸಿ ವಿನಯ್ ಬಚಾವ್ ಆಗಿದ್ದಾರೆ. ಇಲ್ಲದೇ ಹೋದ್ರೆ ಈ ರೀಲ್ಸ್ ಜೋಡಿ ಮತ್ತೊಮ್ಮೆ ಜೊತೆಯಾಗಿ ಜೈಲಿನಲ್ಲಿ ಮುದ್ದೆ ಮುರಿಬೇಕಾಗ್ತಾ ಇತ್ತು.

ವಿನಯ್ ಬೇಲ್ ಪಡೆದು ಹೊರಬಂದ ಮೇಲೆ ತಮ್ಮ ಪಾಡಿಗೆ ಶೂಟಿಂಗ್​ನಲ್ಲಿ ಭಾಗಿಯಗ್ತಾ ತೆಪ್ಪಗೆ ಇದ್ದಾರೆ. ಆದ್ರೆ ರಜತ್ ಮಾತ್ರ ತಾನು ದೊಡ್ಡ ಸಾಧನೆ ಮಾಡಿ ಜೈಲಿಗೆ ಹೋಗಿ ಬಂದವರಂತೆ ಎಲ್ಲೆಡೆ ಸಂದರ್ಶನಗಳನ್ನ ಕೊಟ್ಟಿದ್ದ. ಅಷ್ಟೇ ಅಲ್ಲದೇ ಕೇಸ್​ನ ಸೂಕ್ಷ್ಮಗಳನ್ನ ಕ್ಯಾಮೆರಾ ಎದುರು ಮಾತನಾಡಿದ್ದ. ರೇಣುಕಾಸ್ವಾಮಿ ಎಸೆದ ಮೋರಿಗೆ ಮಚ್ಚು ಎಸೆದಿದ್ದೀನಿ ಅಂತೆಲ್ಲಾ ಮಾತನಾಡಿದ್ದ. ಇದೆಲ್ಲವೂ ಮಚ್ಚೇಶ್ವರಿನಿಗೆ ಸಮಸ್ಯೆ ತಂದೊಡ್ಡಲಿವೆ.

ಡಾ ರಾಜ್‌ಕುಮಾರ್ ಜ್ಞಾಪಕ ಶಕ್ತಿ ನೋಡಿದರೆ ನೀವು ಶಾಕ್ ಆಗ್ತೀರಾ..! ಅಣ್ಣಾವ್ರಿಗೆ ಅದು ವರವೇ?

ಸದ್ಯಕ್ಕಂತೂ ಜಾಮೀನು ಷರತ್ತು ಉಲ್ಲಂಘಿಸಿದ ರಜತ್​ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇನ್ನಾದ್ರೂ ರಜತ್​ಗೆ ಬುದ್ದಿ ಬರುತ್ತಾ ಅನ್ನೋದನ್ನ ಕಾದುನೋಡಬೇಕಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

Related Video