ಜಾಹ್ನವಿ ಸರಳ ಸ್ವಭಾವ ಹಾಗೂ ಒಳ್ಳೆಯತನಕ್ಕೆ ಹೆಸರಾಗಿಲ್ಲ ಅನ್ನೋದು ಹಲವರ ಅನಿಸಿಕೆ. ಆದರೆ, ಜಾಹ್ನವಿ ಸರಿಯಿಲ್ಲ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ..

ಅತಿಲೋಕ ಸುಂದರಿ ಶ್ರೀದೇವಿ (Sridevi) ಅವರನ್ನು ಜಗತ್ತಿನ ಮಿರಾಕಲ್ ಎನ್ನಬಹುದು. ಅದೆಷ್ಟು ಸುಂದರ, ಅದೆಷ್ಟು ಪ್ರತಿಭೆ ಅವರಲ್ಲಿತ್ತು ಎಂದರೆ, ಜಗತ್ತೇ ಅವರನ್ನು ಮೆಚ್ಚಿ ಕೊಂಡಾಡುತ್ತಿತ್ತು. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀದೇವಿ, ಹುಟ್ಟೂರು ತಮಿಳುನಾಡು. ಆದರೆ, ಅವರ ತಾಯಿ ತೆಲುಗು ಮೂಲದವರು. ಹೀಗಾಗಿ ನಟಿ ಶ್ರೀದೇವಿ ಮಾತೃಭಾಷೆ ತೆಲುಗು. ಈ ಕಾರಣಕ್ಕೆ ಶ್ರೀದೇವಿಗೆ ಬಾಲ್ಯದಿಂದಲೇ ತೆಲುಗು ಹಾಗೂ ತಮಿಳು ಭಾಷೆಗಳು ಬರುತ್ತಿದ್ದವು. ತಮಿಳು ಸಿನಿಮಾ ಮೂಲಕ 3 ವರ್ಷದಲ್ಲೇ ಬಾಲನಟಿಯಾಗಿ ಬಂದ ಶ್ರೀದೇವಿ ಅವರು ಆಮೇಲೆ ಚಿತ್ರರಂಗದಲ್ಲೇ ಸ್ಟಾರ್ ನಟಿಯಾಗಿ ಬೆಳೆದರು. 

ದಕ್ಷಿಣ ಭಾರತದ ಸಿನಿಮಾಗಳು, ಅಂದರೆ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಬಾಲಕಲಾವಿದೆ ಆಗಿ ನಟಿಸಿದ್ದಾರೆ ಶ್ರೀದೇವಿ. ನಂತರ, ನಾಯಕಿಯಾಗಿ ನಟಿಸಿ ಸ್ಟಾರ್ ನಟಿಯಾಗಿ ಬಾಲಿವುಡ್‌ಗೆ ಪ್ರವೇಶ ಪಡೆದಿದ್ದಾರೆ ನಟಿ ಶ್ರೀದೇವಿ. ಬಾಲಿವುಡ್‌ನಲ್ಲಿ ಮೊಟ್ಟಮೊದಲ ಸೂಪರ್ ಸ್ಟಾರ್‌ ಆಗಿ ಬೆಳೆದ ಹೆಗ್ಗಳಿಕೆ ಶ್ರೀದೇವಿ ಅವರದು. ಸೌಂದರ್ಯ ಹಾಗು ಪ್ರತಿಭೆ ಸಂಗಮ ಶ್ರೀದೇವಿ ಅಂದು ನಾಯಕನಟರಷ್ಟೇ ಬೇಡಿಕೆ ಗಳಿಸಿಕೊಂಡಿದ್ದರು. ಶ್ರೀದೇವಿ ಕಾಲ್‌ಶೀಟ್ ಪಡೆದ ಬಳಿಕ ಹೀರೋಗಳಿಗೆ ಮಣೆ ಹಾಕಲಾಗುತ್ತಿತ್ತು. ಅಂಥ ಸೂಪರ್‌ ಸ್ಟಾರ್ ಶ್ರೀದೇವಿ ತಮ್ಮ ಮಗಳಿಗೆ ಜಾಹ್ನವಿ ಎಂದು ಹೆಸರೇಕೆ ಇಟ್ಟರು? ಅಲ್ಲೊಂದು ಭಾರೀ ಸೀಕ್ರೆಟ್ ಇದೆ, ನೋಡಿ.. 

ಡಾ ರಾಜ್‌ಕುಮಾರ್ ಜ್ಞಾಪಕ ಶಕ್ತಿ ನೋಡಿದರೆ ನೀವು ಶಾಕ್ ಆಗ್ತೀರಾ..! ಅಣ್ಣಾವ್ರಿಗೆ ಅದು ವರವೇ?

ನಟಿ ಶ್ರೀದೇವಿ ಅವರು 'ಜುದಾಯಿ' ಸಿನಿಮಾದಲ್ಲಿ ನಟಿಸಿದ್ದು ಬಹಳಷ್ಟು ಜನರಿಗೆ ಗೊತ್ತು. ಅನಿಲ್‌ ಕಪೂರ್, ಶ್ರೀದೇವಿ ಹಾಗೂ ಊರ್ಮಿಳಾ ಮಾತೊಂಡ್ಕರ್ ನಟನೆಯ ಜುದಾಯಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಕಮಾಲ್ ಮಾಡಿಲ್ಲ. ಆದರೆ, ಈ ಚಿತ್ರದಲ್ಲಿ ಶ್ರೀದೇವಿ ನಟನೆ ನೋಡಿದವರು ಮರೆಯಲಿಕ್ಕೇ ಅಸಾಧ್ಯ. ಅಂತಹ ಪ್ರೌಢ ಹಾಗೂ ಅಚ್ಚರಿ ಹುಟ್ಟಿಸುವ ನಟನೆ ಅವರದು. ಅವರಿಗೆ ಸರಿಸಾಟಿ ಆಗದಿದ್ದರೂ ಉತ್ತಮ ಅಭಿನಯ ನೀಡಿದ್ದಾರೆ ಊರ್ಮಿಳಾ. ಆದರೆ, ಇಲ್ಲೇ ಇರೋದು ಸೀಕ್ರೆಟ್. ಜುದಾಯಿ ಚಿತ್ರದಲ್ಲಿ ಊರ್ಮಿಳಾ ಪಾತ್ರದ ಹೆಸರು ಜಾಹ್ನವಿ. ಆ ಪಾತ್ರವು ನಟಿ ಶ್ರೀದೇವಿ ಅವರನ್ನು ಅದೆಷ್ಟು ಇಂಪ್ರೆಸ್ ಮಾಡಿತ್ತು ಎಂದರೆ, ಅವರಿಗೆ ಜಾಹ್ನವಿ ಎಂಬ ಹೆಸರನ್ನೇ ಇಷ್ಟಪಟ್ಟಿದ್ದರು. 

ಉರ್ಮಿಳಾ ನಟಿಸಿರುವ ಜಾಹ್ನವಿ ಪಾತ್ರವು ಸೌಮ್ಯವಾಗಿರುವ ಹುಡುಗಿ ಪಾತ್ರ. ಆ ಪಾತ್ರದ ಹುಡುಗಿಯದು ಸರಳ, ಸುಂದರ ಹಾಗೂ ಆದರ್ಶ ವ್ಯಕ್ತಿತ್ವ. ಆ ಜಾಹ್ನವಿ ಪಾತ್ರವು ತನ್ನ ಎದುರು ವಾದಿಸುವ ಪಾತ್ರವಾದರೂ ಶ್ರೀದೇವಿ ಆ ಪಾತ್ರವನ್ನು ತುಂಬಾ ಮೆಚ್ಚಿಕೊಂಡಿದ್ದರು. ಮುಂದೆ ತಮಗೆ ಮಗಳು ಹುಟ್ಟಿದರೆ ಅದೇ ಹೆಸರು (ಜಾಹ್ನವಿ) ಇಡಬೇಕೆಂದು ಅಂದೇ ನಿರ್ಧಾರ ಮಾಡಿದ್ದರು. ಅದನ್ನು ಸ್ವತಃ ಅವರೇ ಹಲವಾರು ಕಡೆ ಹೇಳಿಕೊಂಡಿದ್ದಾರೆ. ಅದರಂತೆ, ಮುಂದೆ ತಮಗೆ ಮಗಳು ಹುಟ್ಟಿದಾಗ ಜುದಾಯಿ ಚಿತ್ರದ ಪಾತ್ರ ಜಾಹ್ನವಿ ಹೆಸರನ್ನು ತಮ್ಮ ಮಗಳಿಗೆ ಇಟ್ಟು ಸಾರ್ಥಕತೆ ಮರೆದಿದ್ದಾರೆ ನಟಿ ಶ್ರೀದೇವಿ. 

'ಜೈಲರ್ 2'ನಲ್ಲಿ ರಜನಿಕಾಂತ್ ಜೊತೆ ಇನ್ನೊಬ್ರು ಇರೋದು ಪಕ್ಕಾ.. ನಿರೀಕ್ಷೆ ನಿಜವಾಗಿದೆ!

ಆದರೆ, ನಟಿ ಶ್ರೀದೇವಿ ಮಗಳು ಜಾಹ್ನವಿ (Janhvi Kapoor) ಆ ಪಾತ್ರದಂತೆ, ತನ್ನ ಅಮ್ಮನ ಆಸೆಯಂತೆ ಇದ್ದಾರೆಯೇ ಎಂದು ಹಲವರು ಪ್ರಶ್ನೆ ಎತ್ತಿದ್ದಾರೆ. ಜುದಾಯಿ ಚಿತ್ರದ ಜಾಹ್ನವಿ ಪಾತ್ರದಂತೆ, ಜಾಹ್ನವಿ ಸರಳ ಸ್ವಭಾವ ಹಾಗೂ ಒಳ್ಳೆಯತನಕ್ಕೆ ಹೆಸರಾಗಿಲ್ಲ ಅನ್ನೋದು ಹಲವರ ಅನಿಸಿಕೆ. ಆದರೆ, ಜಾಹ್ನವಿ ಸರಿಯಿಲ್ಲ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಏಕೆಂದರೆ, ಅವರ ಸ್ವಭಾವ, ಅವರ ಜೀವನ ಅವರ ಇಷ್ಟ ಎನ್ನಲೇಬೇಕು. ಆದರೆ, ಹಲವರು ಪ್ರಕಾರ, ನಟಿ ಶ್ರೀದೇವಿ ಅವರು ಇಷ್ಟಪಟ್ಟ ಜಾಹ್ನವಿ ಪಾತ್ರದ ತದ್ವಿರುದ್ಧ ಇದ್ದಾರೆ ಅವರ ಮಗಳು ಜಾಹ್ನವಿ ಕಪೂರ್.