‘ರಾಧಾ ರಮಣ’ ನಟಿ ಪವಿತ್ರಾ ಜಯರಾಂ ಇನ್ನು ನೆನಪು ಮಾತ್ರ!

ಸಾವು ಯಾರಿಗೆ ಯಾವಾಗ ಹೇಗೆ ಬರುತ್ತೆ ಹೇಳೋದಕ್ಕೆ ಆಗಲ್ಲ. ನಮ್ಮ ಪವರ್ ಸ್ಟಾರ್ ಪುನೀತ್​ ಚಿಕ್ಕವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನ ಹೊಂದಿದ್ರು. ಅದೇ ರೀತಿ ಕನ್ನಡ ಕಿರುತೆರೆಯ ಜನಪ್ರೀಯ ನಟಿ ರಾಧಾ ರಮಣ ಧಾರವಾಹಿ ಖ್ಯಾತಿಯ ಪವಿತ್ರಾ ಜಯರಾಂ ಉಸಿರು ಚೆಲ್ಲಿದ್ದಾರೆ.

Share this Video
  • FB
  • Linkdin
  • Whatsapp

ಸಾವು ಯಾರಿಗೆ ಯಾವಾಗ ಹೇಗೆ ಬರುತ್ತೆ ಹೇಳೋದಕ್ಕೆ ಆಗಲ್ಲ. ನಮ್ಮ ಪವರ್ ಸ್ಟಾರ್ ಪುನೀತ್​ ಚಿಕ್ಕವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನ ಹೊಂದಿದ್ರು. ಅದೇ ರೀತಿ ಕನ್ನಡ ಕಿರುತೆರೆಯ ಜನಪ್ರೀಯ ನಟಿ ರಾಧಾ ರಮಣ ಧಾರವಾಹಿ ಖ್ಯಾತಿಯ ಪವಿತ್ರಾ ಜಯರಾಂ ಉಸಿರು ಚೆಲ್ಲಿದ್ದಾರೆ. ರಸ್ತೆ ಅಪಘಾತದಲ್ಲಿ ಪವಿತ್ರಾ ಜಯರಾಂ ನಿಧನ ಹೊಂದಿದ್ದಾರೆ. ಆಂಧ್ರ ಪ್ರದೇಶದ ಕರ್ನೂಲಿನ ಬಳಿ ನಟಿ ಪವಿತ್ರಾ ಜಯರಾಂ ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿತ್ತು. ಭೀಕರ ಅಪಘಾತದಲ್ಲಿ ಪವಿತ್ರಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ರು. 

ಬಳಿಕ ಆಂಧ್ರ ಪ್ರದೇಶದ ಕರ್ನೂಲಿನಿಂದ ಮಂಡ್ಯ ತಾಲೂಕಿನ ಹನಕೆರೆ ಗ್ರಾಮಕ್ಕೆ ಪವಿತ್ರಾ ಜಯರಾಂ ಮೃತದೇಹವನ್ನ ತರಲಾಗಿತ್ತು. ಯಾಕಂದ್ರೆ ಪವಿತ್ರಾ ಜಯರಾಂ ಹುಟ್ಟೂರು ಮಂಡ್ಯದ ಹನಕೆರೆ. ಹೀಗಾಗಿ ಸ್ವಗೃಹದಲ್ಲಿ ಪವಿತ್ರಾ ಜಯರಾಂ ಅಂತ್ಯಕ್ರಿಯೆ ಮಾಡಲಾಗಿದೆ. ಮೂಲತಃ ಮಂಡ್ಯದವರಾದ ಪವಿತ್ರಾ ಅವರು ರೋಬೋ ಫ್ಯಾಮಿಲಿ, ನೀಲಿ, ರಾಧಾ ರಮಣ, ಜೋಕಾಲಿ ಸೀರಿಯಲ್‌ನಲ್ಲಿ ಪವಿತ್ರಾ ನಟಿಸಿದ್ದರು. ತೆಲುಗಿನ ‘ತ್ರಿನಯನಿ’ ಸೀರಿಯಲ್‌ನಲ್ಲಿ ವಿಲನ್ ಆಗಿ ಪವಿತ್ರಾ ಪ್ರೇಕ್ಷಕರ ಗಮನ ಸೆಳೆದಿದ್ದರು. ಇನ್ಮುಂದೆ ನಟಿ ಪವಿತ್ರಾ ಜಯರಾಂ ನೆನಪು ಮಾತ್ರ.

Related Video