Asianet Suvarna News Asianet Suvarna News

ಒಂದಲ್ಲ, ಎರಡಲ್ಲ 18ನೇ ಮದ್ವೆಗೆ ರೆಡಿಯಾದ ನಟ: ಏನಿದು ಕಥೆ?

ಒಂದು, ಎರಡು ಹೋಗ್ಲಿ ಮೂರು ಮದ್ವೆ ಆಗಿರುವವರನ್ನು ನೋಡಿರ್ತೀರಾ, ಕೇಳಿರ್ತಿರಾ. ಆದರೆ ಇಲ್ಲೊಬ್ಬ ಬರೋಬ್ಬರಿ 18 ಮದುವೆಯಾಗಿದ್ದಾರೆ. ಯಾರು ಈತ, ಈ ಸ್ಟೋರಿ ನೋಡಿ.

ಒಂದು, ಎರಡು ಹೋಗ್ಲಿ ಮೂರು ಮದ್ವೆ ಆಗಿರುವವರನ್ನು ನೋಡಿರ್ತೀರಾ, ಕೇಳಿರ್ತಿರಾ. ಆದರೆ ಇಲ್ಲೊಬ್ಬ ಬರೋಬ್ಬರಿ 18 ಮದುವೆಯಾಗಿದ್ದಾರೆ. ನಟ ನಕುಲ್ 18ನೇ ಮದುವೆಯಾಗಿದ್ದಾರೆ. ಯಾರು ಈ ನಕುಲ್ ಅಂತೀರಾ ಹಿಂದಿ ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ನಟ ನಕುಲ್ 18ನೇ ಮದುವೆಯಾಗೋಕೆ ಸಿದ್ಧರಾಗಿದ್ದಾರೆ. ಅಯ್ಯೋ 18 ಮದುನಾ ಅಂತ ಅಚ್ಚರಿ ಪಡಬೇಡಿ. ನಕುಲ್ ಮದುವೆಯಾಗಿದ್ದು ರಿಯಲ್ ಆಗಿ ಅಲ್ಲ ಸೀರಿಯಲ್ ನಲ್ಲಿ. ಹೌದು ನಕುಲ್ ಇದುವರೆಗೂ 17 ಮದುವೆಯಾಗಿ 18ನೇ ಮದುವೆಗೆ ತಯಾರಾಗಿದ್ದು ಧಾರಾವಾಹಿಯಲ್ಲಿ. 17 ಧಾರಾವಾಹಿಗಳಲ್ಲಿ ನಟಿಸಿದ್ದು 17 ಹುಡುಗಿಯರ ಜೊತೆ ಮದುವೆಯಾಗಿದ್ದಾರೆ. ಈ ಬಗ್ಗೆ ಅವರೇ ಹೇಳಿದ್ದಾರೆ.