ಜೊತೆ ಜೊತೆಯಲಿ ಅನಿರುದ್ಧ್‌ ಪಾತ್ರಕ್ಕೆ ಸಿ.ಟಿ.ರವಿ?

ಮಾಜಿ ಸಚಿವ ಸಿ.ಟಿ.ರವಿಯವರನ್ನು ಆರ್ಯವರ್ಧನ್ ಪಾತ್ರಕ್ಕೆ ನಟಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಸಿ.ಟಿ.ರವಿ ಸೇಮ್ ಆರ್ಯವರ್ಧನ್ ಥರಾನೆ ಕಾಣುತ್ತಾರೆ. ಇದೊಂದು ರೀತಿಯಲ್ಲಿ ತಮಾಷೆ ಅನಿಸಿದರೂ, ಆರ್ಯವರ್ಧನ್ ಪಾತ್ರವನ್ನು ಅನೇಕರು ಸಿ.ಟಿ.ರವಿ ಅವರಲ್ಲಿ ಕಾಣುತ್ತಿದ್ದಾರೆ.

Share this Video
  • FB
  • Linkdin
  • Whatsapp

ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಿಂದ ನಟ ಅನಿರುದ್ಧ್‌ ಅವರನ್ನು ಹೊರಗಿಡಲಾಗಿದೆ. ಸಂಭಾವನೆ, ಸಮಯ ಪಾಲನೆ, ಧಾರಾವಾಹಿಯ ಕಥೆಯಲ್ಲಿ ಮೂಗು ತೂರಿಸೋದು, ಬರೆದುಕೊಟ್ಟ ಡೈಲಾಗ್ ಹೇಳಲು ಒಪ್ಪದಿರುವುದು ಹೀಗೆ ಹಲವು ಅಸಮಾಧಾನದ ಹಿನ್ನಲೆಯಲ್ಲಿ ನಿರ್ದೇಶಕ ಆರೂರ್ ಜಗದೀಶ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಇದೀಗ ಆರ್ಯವರ್ಧನ್ ಸ್ಥಾನಕ್ಕೆ ಹೊಸ ಕಲಾವಿದನನ್ನು ತರಬೇಕಾಗಿದೆ. ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್‌ ಸಾಕಷ್ಟು ತೂಕ ತುಂಬಿದ್ದರು. ಹೀಗಾಗಿ ಅಂತಹುದೇ ಕಲಾವಿದನನ್ನು ತರಬೇಕಾಗಿದೆ. ಈ ಕಾರಣದಿಂದ ಅನಿರುದ್ಧ್‌ ಬದಲಿಗೆ ಯಾರು ನಟಿಸುತ್ತಾರೆ ಅನ್ನುವ ಕುತೂಹಲ ಎಲ್ಲರಲ್ಲಿದೆ. ಈಗ ಮಾಜಿ ಸಚಿವ ಸಿ.ಟಿ.ರವಿಯವರನ್ನು ಆರ್ಯವರ್ಧನ್ ಪಾತ್ರಕ್ಕೆ ನಟಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಸಿ.ಟಿ.ರವಿ ಸೇಮ್ ಆರ್ಯವರ್ಧನ್ ತರಾನೆ ಕಾಣುತ್ತಾರೆ. ಇದೊಂದು ರೀತಿಯಲ್ಲಿ ತಮಾಷೆ ಅನಿಸಿದರೂ, ಆರ್ಯವರ್ಧನ್ ಪಾತ್ರವನ್ನು ಅನೇಕರು ಸಿ.ಟಿ.ರವಿ ಅವರಲ್ಲಿ ಕಾಣುತ್ತಿದ್ದಾರೆ. ಅಲ್ಲದೇ, ಅನಿರುದ್ಧ್‌ ಅವರಂತೆ ಗೆಟಪ್ ಹೊಂದಿರುವ ರವಿ ಅವರ ಫೋಟೋವನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video