ನಟನೆಯಲ್ಲೂ ಮ್ಯಾಜಿಕ್ಕು, ಏನಿವನ ಗಮ್ಮತ್ತು?.. ಹಳ್ಳಿ ಹೈದನ ಹಿಂದೆ ದೈವ ಶಕ್ತಿ ಇದ್ಯಾ?
ಹನುಮಂತನ ಹೊಸ ವೇಷ, ಕನ್ನಡಿಗರ ಮನಗೆದ್ದ ಕಾಳಿದಾಸ! ಹಾಡು, ಡ್ಯಾನ್ಸು ಆಯ್ತು, ನಟನೆಯಲ್ಲೂ ಹನುಮನ ಮ್ಯಾಜಿಕ್ಕು! ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..
ಹನುಮಂತನ ಹೊಸ ವೇಷ.. ಕನ್ನಡಿಗರ ಮನಗೆದ್ದ ಕಾಳಿದಾಸ..!,, ಕುರಿಗಾಹಿಜಗತ್ತು ಗೆದ್ದ ಕಥೆ.. ಹನುಮ ಈ ಕಾಲದ ಕಾಳಿದಾಸ..!,, ಹಾಡು, ಡ್ಯಾನ್ಸು ಆಯ್ತು.. ನಟನೆಯಲ್ಲೂ ಹನುಮನ ಮ್ಯಾಜಿಕ್ಕು..!
ಬಿಗ್ ಬಾಸ್ ವಿನ್ನರ್ ಹನುಮಂತ ನಟನಾಗ್ತಾನೇ ಅನ್ನೋ ಸುದ್ದಿ ಹರಿದಾಡ್ತಾನೇ ಇದೆ. ಸದ್ಯ ಕಿರುತೆರೆಯಲ್ಲಿ ತನ್ನ ನಟನೆಯ ಝಲಕ್ ತೋರಿಸ್ತಾ ಇದ್ದಾನೆ ಹನುಮಂತ. ಅದ್ರಲ್ಲೂ ಕವಿರತ್ನ ಕಾಳಿದಾಸ ಪಾತ್ರವನ್ನ ಮಾಡಿ ಎಲ್ಲರನ್ನೂ ಅಚ್ಚರಿ ಪಡಿಸಿದ್ದಾನೆ . ಅಸಲಿಗೆ ಹನುಮಂತ ಕೂಡ ಕಾಳಿದಾಸನಂತೆ ಆರಂಭದಲ್ಲಿ ಕುರಿಗಾಹಿ ಆಗಿದ್ದವನು. ಬಳಿಕ ಅಸಾಧ್ಯ ಪ್ರತಿಭೆಯಿಂದ ನಾಡನ್ನೇ ಮೆಚ್ಚಿಸಿ ಆಭಿನವ ಕಾಳಿದಾಸ ಅನ್ನಿಸಿಕೊಂಡವನು.
ಕಿರುತೆರೆಯಿಂದ ಹನುಮಂತನ ಆಕ್ಟಿಂಗ್ ಜರ್ನಿ ಶುರುವಾಗಿದೆ. ಹನುಮ ಹೀರೋ ಕೂಡ ಆಗೋ ಪ್ಲಾನ್ ನಡೀತಿದೆ. ಹನುಮಂತ ಬಿಗ್ ಬಾಸ್ ಗೆಲ್ತಾನೇ ಅವನನ್ನ ನಾಯಕನಟ ಆಗಿಸಿ ಸಿನಿಮಾ ಮಾಡಬೇಕು ಅಂತ ತಯಾರಿ ನಡೆದಿತ್ತು. ಈಗ ಕಾಳಿದಾಸ ಪಾತ್ರ ಮಾಡಿ ತಾನೂ ನಟನೆಗೂ ಸೈ ಅಂದಿದ್ದಾನೆ ಹನುಮ. ಹಾಗಾದ್ರೆ ಹನುಮಂತ ಹೀರೋ ಆಗ್ತಾನಾ.. ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಹನುಮಂತನನ್ನ ಅಭಿನವ ಕಾಳಿದಾಸ ಅಂತ ಕರೆಯೋದಕ್ಕೆ ಕಾರಣ ಅವನ್ನ ಹಿನ್ನೆಲೆ. ಪ್ರಕೃತಿಯ ನಡುವೆ ಬೆಳೆದ ಈ ಹಳ್ಳಿ ಹೈದ ದೈವಶಕ್ತಿ, ಮನೋಬಲದಿಂದ ಕವಿರತ್ನ ಕಾಳಿದಾಸರಂತೆಯೇ ಫೇಮಸ್ ಆದವನು. ಹನುಮನ ಕಥೆಗೂ ಕಾಳಿದಾಸನ ಕಥೆಗೂ ಹೆಚ್ಚು ವೆತ್ಯಾಸವೇ ಇಲ್ಲ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..