
ಅಂದು ಒಳ್ಳೆ ಹುಡುಗ ಪ್ರಥಮ್ ಸೀಸನ್‌ನಲ್ಲಿ ನಡೆದ ಘಟನೆ ಈಗ Bigg Boss Kannada 12 ಶೋನಲ್ಲಿ ನಡೆದುಹೋಯ್ತು!
ಬಿಗ್ಬಾಸ್ ಮನೆಯಲ್ಲಿ ಅದೇನೇ ಜಗಳ ಆಡಿದ್ರೂ ಮಾತಿನಲ್ಲಿರಬೇಕು. ಅದು ಬಿಟ್ಟು ಕೈ ಕೈ ಮಿಲಾಯಿಸಿದ್ರೆ, ಇನ್ನೊಬ್ಬ ಸ್ಪರ್ಧಿಯ ಮೇಲೆ ಹಲ್ಲೆ ಮಾಡೋಕೆ ಮುಂದಾದ್ರೆ ಅಂಥವರನ್ನ ಕೂಡಲೇ ಇಜೆಕ್ಟ್ ಮಾಡಲಾಗುತ್ತೆ. ಬಿಗ್ಬಾಸ್ ಸೀಸನ್-12ನಲ್ಲೂ ಇಂಥದ್ದೊಂದು ಘಟನೆ ನಡೆದು ಹೋಗಿದೆ.
ಈ ಸೀಸನ್ನ ನೆಚ್ಚಿನ ಸ್ಪರ್ಧಿ ಗಿಲ್ಲಿ ಮೇಲೆ ಹಲ್ಲೆ ನಡೆದಿದೆ. ಅದೇನೆ ಜಗಳ ಮಾಡಿದ್ರೂ ಇನ್ನೊಬ್ಬ ಸ್ಪರ್ಧಿ ಮೇಲೆ ಕೈ ಮಾಡುವಂತಿಲ್ಲ ಅನ್ನೋದು ಬಿಗ್ಬಾಸ್ ಮನೆಯ ಮೂಲ ನಿಯಮ. ಹಾಗೊಂದು ವೇಳೆ ಯಾರಾದ್ರೂ ಯಾವುದೇ ಸ್ಪರ್ಧಿ ಮೇಲೆ ಹಲ್ಲೆ ನಡೆಸೋಕೆ ಮುಂದಾದ್ರೆ ಅವರನ್ನ ತಕ್ಷಣ ಮನೆಯಿಂದ ಆಚೆ ಹಾಕಲಾಗಿತ್ತು. ಸದ್ಯ ಬಿಗ್ ಬಾಸ್ ಸೀಸನ್ 12ನಲ್ಲೂ ಅಂಥಾ ಘಟನೆ ನಡೆದಿದೆ.