ಬಿಗ್​ಬಾಸ್ ಕನ್ನಡ ರಣಾಂಗಣ, ಮನೆ ಮಂದಿಯ ಚಳಿ ಬಿಡಿಸಿದ ವೈಲ್ಡ್ ಕಾರ್ಡ್ ಸ್ಪರ್ಧಿ!

ಬಿಗ್ ಬಾಸ್ ಮನೆಗೆ 'ಕಾಂತಾರ' ಖ್ಯಾತಿಯ ರಘು, ರಿಷಾ ಗೌಡ ಮತ್ತು ಸೂರಜ್ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಇವರ ಆಗಮನದಿಂದ ಮನೆಯಲ್ಲಿ ಗಲಾಟೆ, ಜಗಳಗಳು ಹೆಚ್ಚಾಗಿದ್ದು, ಹಳೆಯ ಸ್ಪರ್ಧಿಗಳಿಗೆ ಹೊಸ ಸವಾಲು ಎದುರಾಗಿದೆ. ಈ ಹೊಸ ಸ್ಪರ್ಧಿಗಳ ಅಬ್ಬರದಿಂದ ದೊಡ್ಮನೆಯ ಆಟ ಮತ್ತಷ್ಟು ರಂಗೇರಿದೆ.

Share this Video
  • FB
  • Linkdin
  • Whatsapp

ಬಿಗ್ ಬಾಸ್ ಶೋ ಈ ಸಾರಿ ಆರಂಭದಲ್ಲೇ ರಂಗೇರ್ತಾ ಇದೆ. ಅದ್ರಲ್ಲೂ ಸಖತ್ ವೈಲ್ಡ್ ಆಗಿರೋ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದು ಮನೆ ರಣಾಂಗಣವಾಗಿದೆ. ಹೊಸದಾಗಿ ಬಂದ ಸ್ಪರ್ಧಿಗಳ ಅಬ್ಬರಕ್ಕೆ ಹಳಬರು ಸೈಲೆಂಟ್ ಆಗಿದ್ದಾರೆ. ಈ ಸಾರಿ ಬಿಗ್​ಬಾಸ್​​ನಲ್ಲಿ ಆರಂಭದಲ್ಲೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಲಾಗ್ತಾ ಇದೆ. ಕಳೆದವಾರ ಒಬ್ರು ಮಿಡ್ ವೀಕ್ ಎಲಿಮಿನೇಟ್ ಆದ್ರೆ ವಾರಾಂತ್ಯಕ್ಕೆ ಇಬ್ಬರು ಸ್ಪರ್ಧಿಗಳು ಹೊರಬಿದ್ದಿದ್ರು. ಅದರ ಬೆನ್ನಲ್ಲೇ ಸೋಮವಾರ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಸೀಸನ್​ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಸಿಂಗರ್ ಹನುಮಂತ ವಿನ್ನರ್ ಆಗಿ ಬೀಗಿದ್ದ. ಈ ಸಾರಿ ಕೂಡ ನಾವೇ ಕಪ್ ಹೊಡೆಯೋದು ಅಂತ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ ಮೂವರು ಸ್ಪರ್ಧಿಗಳು.

ಕಾಂತಾರ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದ ಮ್ಯೂಟಂಟ್ ರಘು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದು ರೆಸಾರ್ಟ್​ ಅಲ್ಲ ಅಂತ ಎಚ್ಚರಿಕೆ ಕೊಡ್ತಾ ಎಂಟ್ರಿ ಕೊಟ್ಟ ರಘುಗೆ ಆರಂಭದಲ್ಲೇ ಅಶ್ವಿನಿ ಜೊತೆ ದೊಡ್ಡ ಜಗಳ ಆಗಿದೆ. ಇಬ್ಬರೂ ಏಕವಚನದಲ್ಲಿ ಕಿತ್ತಾಡಿಕೊಂಡಿದ್ದಾರೆ. ರಿಷಾ ಗೌಡ ಬಿಗ್ ಬಾಸ್ ಮನೆಗೆ ಬಂದಿರೋ ಮತ್ತೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ. ರಿಷಾ ಗೌಡ ಮೂಲತಃ ಅಥ್ಲೀಟ್. ಕಾಲಿಗೆ ಪೆಟ್ಟಾಗಿದ್ದರಿಂದ ಸ್ಪೋರ್ಟ್ಸ್‌ನಿಂದ ದೂರ ಉಳಿದಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲೂ ಹೆಸರು ಮಾಡಿರೋ ರಿಷಾ ಮಿಸ್ ಕರ್ನಾಟಕ 2020 ರನ್ನರ್ ಅಪ್ ಕೂಡ ಆಗಿದ್ದಾರೆ. ರಿಷಾ ಕೂಡ ಆರಂಭದಲ್ಲೇ ಮನೆಮಂದಿಗೆ ಚಳಿ ಬಿಡಿಸಿದ್ದಾರೆ. ದೊಡ್ಮನೆಯಲ್ಲಿ ಬರೀ ಗಲಾಟೆ ಅಷ್ಟೇ ಅಲ್ಲ, ರೊಮ್ಯಾನ್ಸ್ ಕೂಡ ಶುರುವಾಗೋ ಲಕ್ಷಣ ಕಾಣ್ತಾ ಇದೆ. ಸ್ಮಿಮ್ಮಿಂಗ್​ ಪೂಲ್‌ನಿಂದ ಎದ್ದು ಬರುವ ಸೂರಜ್ ಒದ್ದೆ ಶರ್ಟ್ ಬಿಚ್ಚಿ ಸಿಕ್ಸ್ ಪ್ಯಾಕ್ ತೋರಿಸಿದ್ದಾರೆ. ಮನೆಯೊಳಗಿರೋ ಚೆಲುವೆ ಯಾರು ಅಂತ ಕೇಳಿದ್ದಕ್ಕೆ ರಾಶಿಕಾಗೆ ರೋಸ್ ಕೊಟ್ಟಿದ್ದಾರೆ.

ಒಟ್ನಲ್ಲಿ ಈ ಮೂವರ ಎಂಟ್ರಿಯಿಂದ ಬಿಗ್ ಬಾಸ್ ಆಟಕ್ಕೆ ಹೊಸ ರಂಗು ಬಂದಿದೆ. ಇವರ ಎಂಟ್ರಿ ನೋಡಿ ರಾಂಗ್ ಆಗಿರೋ ಬಿಗ್​ಬಾಸ್ ಮನೆಯ ಹಳೆ ಸದಸ್ಯರು ಬನ್ನಿ ಒಂದು ಕೈ ನೋಡೋಣ ಅಂತಿದ್ದಾರೆ. ಒಟ್ನಲ್ಲಿ ದೊಡ್ಮನೆ ಆಟಕ್ಕೆ ಈಗ ಕಳೆ ಬಂದಿದೆ.

Related Video