ಅಮಾಯಕ ಹನುಮಂತಣ್ಣನ ಬಣ್ಣ ಬಯಲು ಮಾಡಿದ ಯೋಗರಾಜ್ ಭಟ್; ಏನಿದು ಸೈಲೆಂಟ್ ಪ್ಲ್ಯಾನ್?
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿರೋ ಹನುಮಂತನನ್ನ ಮೊದಲು ಎಲ್ಲರೂ ಮುಗ್ದ ಅಂದುಕೊಂಡಿದ್ರು. ಆದ್ರೆ ಈಗ ಹನುಮಂತನ ಮುಗ್ದತೆಗೆ ಬಗ್ಗೆ ಎಲ್ಲರಿಗೂ ಡೌಟ್ ಶುರುವಾಗಿದೆ.
ಬಿಗ್ ಬಾಸ್ ಸೀಸನ್ 11ರಲ್ಲಿ ಒಂದು ವೀಕೆಂಡ್ ಪಂಚಾಯಿತಿ ನಡೆಸಲು ಯೋಗರಾಜ್ ಭಟ್ ಆಗಮಿಸಿದ್ದರು. ಆಗ ಗಾಯಕ ಹನುಮಂತನಿಗೆ ನೇರವಾಗಿ ಪ್ರಶ್ನೆ ಕೆಲಿದ್ದರು, . ಹನುಮಂತ ಮುಗ್ದನಲ್ಲ ಅಂತ ಅನೇಕ ಮನೆಮಂದಿ ಕೂಡ ವಾದ ಮಾಡಿದ್ದಾರೆ. ಇವನು ಮುಗ್ದತೆಯ ಮುಖವಾಡ ಹಾಕ್ಕೊಂಡು ಬಿಗ್ ಬಾಸ್ ಟ್ರೋಫಿ ಹೊಡೆಯೋಕೆ ಸ್ಕೆಚ್ ಹಾಕಿದ್ದಾನೆ ಅಂತ ಹನುಮಂತಣ್ಣನ ಮೇಲೆ ಆರೋಪ ಮಾಡಿದ್ದಾರೆ ಇನ್ನಿತರ ಸ್ಪರ್ಧಿಗಳು. ಆದ್ರೆ ಇಷ್ಟೆಲ್ಲಾ ಪಂಚಾಯತಿ ನಡೆದ್ರೂ ಹನುಮಂತ ಮಾತ್ರ ಹಳೇ ಸ್ಟೈಲ್ನಲ್ಲೇ ನನಗೇನು ಗೊತ್ತಿಲ್ಲ. ನನ್ನನ್ನ ಬಿಟ್ರೆ ಮನೆಗೆ ಹೋಗ್ತಿನಿ ಅಂದಿದ್ದಾನೆ.
ಹೆಚ್ಚಿನ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ: Asianet Suvarna News videos