Asianet Suvarna News Asianet Suvarna News

ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ಹಿರೇಬೆಣಕಲ್ ಶಿಲಾ ಸಮಾಧಿಗಳು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಪ್ರಾಗೈತಿಹಾಸಿಕ ಹಿನ್ನೆಲೆ ಹೊಂದಿರುವ ‘ಹಿರೇಬೆಣಕಲ್‌ ಶಿಲಾ ಸಮಾಧಿ’ಗಳ ತಾಣ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಅಧಿಕೃತ ಮಾನ್ಯತೆ ಹೊಂದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
 

ಹಿರೇಬೆಣಕಲ್‌ ಶಿಲಾ ಸಮಾಧಿಗಳು ಬಹುತೇಕ ಕನ್ನಡಿಗರಿಗೆ ಅಪರಿಚಿತವಾದ ಸ್ಥಳ. ಆದರೆ ಕರ್ನಾಟಕದ ಅದ್ಭುತ ಇದು. ಸುಮಾರು 3000-4000 ವರ್ಷಗಳಷ್ಟುಹಳೆಯ ಇತಿಹಾಸ ಇರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಈ ತಾಣ ಸದ್ಯ ರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಅಧಿಕೃತ ಮಾನ್ಯತೆ ಹೊಂದಿದೆ. ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌(Asianet suvarnata news) ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ(Karnataka Tourism Department) ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಈ ಘೋಷಣೆ ಮಾಡಿದರು. 

ಕೊಪ್ಪಳ(Koppal) ಜಿಲ್ಲೆ ಗಂಗಾವತಿಯಿಂದ ಸುಮಾರು 10 ಕಿಮೀ ದೂರದ ಹಿರೇಬೆಣಕಲ್‌ ಗ್ರಾಮ(Hirebenakal village)ದ ಮೋರ್ಯಾರ ಗುಡ್ಡ(Morya Hill)ದಲ್ಲಿ ಆದಿಮಾನವ ನಿರ್ಮಿತ ಬೃಹತ್‌ ಶಿಲಾಯುಗದ ನೂರಾರು ಶಿಲಾಸಮಾಧಿಗಳು ಹಾಗೂ ಆದಿಮಾನವ ರಚಿತ ಗುಹಾಚಿತ್ರಗಳು ಇವೆ. ಲಂಡನ್ನಿನ ಸ್ಟೋನ್‌ ಹೆಂಜಸ್‌(Stonehenges of London), ಈಜಿಪ್ಟಿನ ಪಿರಮಿಡ್ಡುಗಳು(Egyptian pyramids), ಬಹರೈನಿನ ದಿಲ್ಮನ್‌ ಸಮಾಧಿ ದಿಬ್ಬಗಳಂತೆ-ಸಾವಿನ ಗೌರವ ಸೂಚಕಗಳು-ಈ ಶಿಲಾಸಮಾಧಿ ಡೋಲ್ಮನ್ಗಳು. ವಿಶ್ವದ ಹಲವೆಡೆ ಇಂಥ ಡೋಲ್ಮನ್‌ಗಳು ಇದ್ದು, ಕೋರಿಯಾ ಒಂದರಲ್ಲೇ ವಿಶ್ವದ ಶೇ. 40ರಷ್ಟುಡೋಲ್ಮನ್‌ಗಳು ಪತ್ತೆಯಾಗಿವೆ. ಭಾರತದಲ್ಲಿ ಹಲವೆಡೆ ಈ ಶಿಲಾ ಸಮಾಧಿಗಳು ಪತ್ತೆಯಾಗಿವೆಯಾದರೂ, ಹಿರೇಬೆಣಕಲ್‌ ಮೋರ್ಯಾರ ಗುಡ್ಡ ಇಡೀ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೆಗಾಲಿಥಿಕ್‌ ತಾಣವಾಗಿದೆ.

ಹಿರೇಬೆಣಕಲ್‌ಗೆ ಕರ್ನಾಟಕದ ಅದ್ಭುತ ಸ್ಥಾನ: ಗಂಗಾವತಿಯಲ್ಲಿ ಸಂಭ್ರಮಾಚರಣೆ

Video Top Stories