Asianet Suvarna News Asianet Suvarna News

ಹಿರೇಬೆಣಕಲ್‌ಗೆ ಕರ್ನಾಟಕದ ಅದ್ಭುತ ಸ್ಥಾನ: ಗಂಗಾವತಿಯಲ್ಲಿ ಸಂಭ್ರಮಾಚರಣೆ

ಕನ್ನಡಪ್ರಭ ಹಾಗೂ ಸುವರ್ಣ ವಾಹಿನಿ ಜಂಟಿಯಾಗಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಿದ್ದು, ಅದರಲ್ಲಿ ಇದೂ ಒಂದು ಎಂದು ಅಧಿಕೃತ ಘೋಷಣೆ ಮಾಡಿದ್ದರಿಂದ ಪಟಾಕಿ ಸಿಡಿಸಿ ಘೋಷಣೆ ಕೂಗಿದ ಗಂಗಾವತಿ ಜನ. 

Celebration in Gangavathi for Hirebenakal Got Place in 7 Wonders of Karnataka grg
Author
First Published Feb 28, 2023, 7:03 AM IST

ಗಂಗಾವತಿ(ಫೆ.28): ತಾಲೂಕಿನ ಹಿರೇಬೆಣಕಲ್‌ ಗ್ರಾಮದಲ್ಲಿರುವ ‘ಮೋರೇರ್‌ ಬೆಟ್ಟ’ ಎಂದೇ ಖ್ಯಾತಿ ಪಡೆದಿರುವ ಶಿಲಾ ಸಮಾಧಿಗಳು ಇರುವ ಸ್ಥಳ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಅಧಿಕೃತ ಮಾನ್ಯತೆ ಪಡೆದ ಹಿನ್ನೆಲೆ ಗಂಗಾವತಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನಾಗರಿಕರು ಸಂಭ್ರಮಾಚರಣೆ ಆಚರಿಸಿದರು. ಕನ್ನಡಪ್ರಭ ಹಾಗೂ ಸುವರ್ಣ ವಾಹಿನಿ ಜಂಟಿಯಾಗಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಿದ್ದು, ಅದರಲ್ಲಿ ಇದೂ ಒಂದು ಎಂದು ಅಧಿಕೃತ ಘೋಷಣೆ ಮಾಡಿದ್ದರಿಂದ ಪಟಾಕಿ ಸಿಡಿಸಿ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಹಿರೇಬೆಣಕಲ್‌ ಗ್ರಾಮದ ಸನಿಹದಲ್ಲಿರುವ ಮೋರೇರ್‌ ಬೆಟ್ಟಈಗ ಐತಿಹಾಸಿಕ ಪ್ರಸಿದ್ಧಿ ಪಡೆದಿದ್ದು, ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಗುರುತಿಸಿದ್ದ ಹಿರೇಬೆಣಕಲ್‌ ಗ್ರಾಮದ ಮೋರೇರ್‌ ಬೆಟ್ಟವನ್ನು ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಮುಖ್ಯಮಂತ್ರಿಗಳಿಂದ ಘೋಷಣೆ ಮಾಡಿಸಿದ್ದು ಸಂತಸ ತಂದಿದೆ ಎಂದರು.

Hirebenakal megalithic: ಕರ್ನಾಟಕದ ಏಳು ಅದ್ಭುತಗಳಲ್ಲಿ ಹಿರೇಬೆಣಕಲ್‌ ಶಿಲಾ ಸಮಾಧಿ

ವಿಧಾನಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಮಾತನಾಡಿ, ಹಿರೇಬೆಣಕಲ್‌ ಬೃಹತ್‌ ಶಿಲಾಯುಗದ ಗ್ರಾಮವಾಗಿದೆ. ಸ್ಥಳದ ಪರಿಚಯ ಮಾಡಿದ್ದರಿಂದ ಪ್ರವಾಸೋದ್ಯಮ ಬೆಳೆಯಲು ಸಾಧ್ಯವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಹಸೀಲ್ದಾರ ಶ್ರೀಮಂಜುನಾಥ, ಬಿಜೆಪಿ ನಾಯಕ ಸೂರಿಬಾಬು, ಡಾ.ಶರಣ ಬಸಪ್ಪ ಕೋಲ್ಕಾರ, ಮಂಜುನಾಥ ಗುಡ್ಲಾನೂರ್‌, ಡಾ.ಶಿವಕುಮಾರ್‌ ಮಾಲಿಪಾಟೀಲ, ವೀರೇಶ ಅಂಗಡಿ, ಸಂತೋಷ ಕೆಲೋಜಿ, ಚನ್ನಬಸವಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಮಂಜುನಾಥ ಎಚ್‌. ಎಂ, ರಾಚೋಟಯ್ಯ, ವಿಷ್ಣುತೀರ್ಥ ಜೋಷಿ, ನಾಗರಾಜ ಗುತ್ತೆದಾರ, ವೀರಭದ್ರಪ್ಪ ನಾಯಕ, ಆನಂದ ಅಕ್ಕಿ, ರಾಜೇಶ್‌ ನಾಯಕ, ರಮೇಶ್‌ ಗಬ್ಬೂರ, ಮೈಲಾರಪ್ಪ ಬೂದಿಹಾಳ, ನೀಲಕಂಠಪ್ಪ ನಾಗಶೆಟ್ಟಿ, ಪವನಕುಮಾರ ಗುಂಡೂರ, ಸದಾನಂದ ಸೇಠ, ರಮೇಶ ಬನ್ನಿಕೊಪ್ಪ, ಅಶೋಕ ರಾಯ್ಕರ್‌, ಆಂಜನೇಯ, ವಿಜಯ್‌ ಬಳ್ಳಾರಿ ಸೇರಿದಂತೆ ಹಿರೇಬೆಣಕಲ್‌ ನಾಗರಿಕರು ಭಾಗವಹಿಸಿದ್ದರು.

Follow Us:
Download App:
  • android
  • ios