ಟೋಕಿಯೋ ಒಲಿಂಪಿಕ್ಸ್‌ ತಾರೆ ಮೀರಾಬಾಯಿ ಚಾನು ಎಕ್ಸ್‌ಕ್ಲೂಸಿವ್‌ ಸಂದರ್ಶನ

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ, ಆ ಬಳಿಕ ನಿರಂತರ ಪರಿಶ್ರಮ ನಡೆಸಿ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಕನಸಾಗಿತ್ತು. ಆ ಕನಸು ನನಸಾಗಿದೆ. ಈ ಖುಷಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Share this Video
  • FB
  • Linkdin
  • Whatsapp

ಟೋಕಿಯೋ(ಜು.25): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಮೊದಲ ದಿನವೇ ಭಾರತ ಪದಕದ ಬೇಟೆಯಾಡಿದ್ದು, 49 ಕೆ.ಜಿ. ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇದೀಗ ಚಾನು ಏಷ್ಯಾನೆಟ್‌ ಕನ್ನಡ ಮಾತೃಸಂಸ್ಥೆ ಏಷ್ಯಾನೆಟ್‌ ಜತೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ, ಆ ಬಳಿಕ ನಿರಂತರ ಪರಿಶ್ರಮ ನಡೆಸಿ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಕನಸಾಗಿತ್ತು. ಆ ಕನಸು ನನಸಾಗಿದೆ. ಈ ಖುಷಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಬಾಲ್ಯದಲ್ಲಿ ಕಟ್ಟಿಗೆಗಳನ್ನು ಎತ್ತಿ ಊರನ್ನೇ ಬೆರಗಾಗಿಸಿದ್ದ ಮೀರಾಬಾಯಿ ಚಾನು..!

ನಾನು ಸ್ನ್ಯಾಚ್‌ ಯಶಸ್ವಿಯಾಗಿ ಮುಗಿಸಿದ ಬಳಿಕ ನನಗೆ ಕನಿಷ್ಠ ಬೆಳ್ಳಿ ಪದಕ ಸಿಗುವುದು ಖಚಿತ ಎನಿಸಿತು. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಬೇಕು ಎಂದು ಗುರಿಯಿಟ್ಟುಕೊಂಡಿದ್ದೆ, ಆದರೆ ಬೆಳ್ಳಿ ಗೆದ್ದಿದ್ದಕ್ಕೆ ಖುಷಿಯಿದೆ ಎಂದು ಚಾನು ಹೇಳಿದ್ದಾರೆ.

49 ಕೆ.ಜಿ ವೇಟ್‌ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಚಾನು ಸ್ನ್ಯಾಚ್‌ ವಿಭಾಗದಲ್ಲಿ 87 ಕೆ.ಜಿ, ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ 115 ಹೀಗೆ ಒಟ್ಟು 202 ಕೆ.ಜಿ. ವೇಟ್‌ಲಿಫ್ಟ್ ಮಾಡಿ ಒಲಿಂಪಿಕ್ಸ್‌ ಬೆಳ್ಳಿ ಪದಕ ಜಯಿಸಿದ್ದಾರೆ. ಮೀರಾಬಾಯಿ ಚಾನು ಸಂಪೂರ್ಣ ಸಂದರ್ಶನ ಇಲ್ಲಿದೆ ನೋಡಿ

Related Video