Asianet Suvarna News Asianet Suvarna News

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಗ್ರಾಮದಲ್ಲಿ ಭಾರತೀಯರ ಝಲಕ್

Jul 19, 2021, 5:21 PM IST

ಟೋಕಿಯೋ(ಜು.19): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಟೋಕಿಯೋ ಕ್ರೀಡಾಗ್ರಾಮ ಪ್ರವೇಶಿಸಿರುವ ಭಾರತೀಯ ಅಥ್ಲೀಟ್‌ಗಳು ಕೊನೆಯ ಕ್ಷಣದ ಕಸರತ್ತು ನಡೆಸಲಾರಂಭಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದ್ದು, ಭಾರತಕ್ಕೆ ಪದಕದ ಭರವಸೆ ಮೂಡಿಸಿರುವ ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ ಆತನು ದಾಸ್‌ ಜತೆಯಾಗಿ ಬಿಲ್ವಿದ್ದೆ ಅಭ್ಯಾಸ ನಡೆಸಿದ್ದಾರೆ.

ಚೀನಾ, ರಷ್ಯಾ, ಅಮೆರಿಕ ಸೇರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಹೆಣ್ಮಕ್ಳೇ ಜಾಸ್ತಿ ಗುರೂ..!

ಇನ್ನು ಟೋಕಿಯೋ ಒಲಿಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಏಕೈಕ ಜಿಮ್ನಾಸ್ಟಿಕ್‌ ಪಟು ಎನಿಸಿಕೊಂಡಿರುವ ಪ್ರಣತಿ ನಾಯಕ್, ಬ್ಯಾಡ್ಮಿಂಟನ್‌ ಪಟುಗಳಾದ ಬಿ. ಸಾಯಿ ಪ್ರಣೀತ್, ಡಬಲ್ಸ್‌ ಆಟಗಾರರಾದ ಸಾತ್ವಿಕ್‌ರಾಜ್ ರಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಕೂಡಾ ತಮ್ಮ ಕೋಚ್‌ ಜತೆ ಭರ್ಜರಿಯಾಗಿಯೇ ಅಭ್ಯಾಸ ನಡೆಸಿದ್ದಾರೆ. ಸೋಮವಾರ(ಜು.19) ಟೋಕಿಯೋ ಕ್ರೀಡಾಗ್ರಾಮದಲ್ಲಿ ಭಾರತೀಯ ಅಥ್ಲೀಟ್‌ಗಳ ಝಲಕ್‌ ಹೀಗಿತ್ತು ನೋಡಿ.