Shivamogga: ಮುಸ್ಲಿಂ ಗೂಂಡಾಗಳೇ ಹರ್ಷನ ಕೊಲೆ ಮಾಡಿದ್ದು, ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ
ಹರ್ಷ ಕೊಲೆಯಾದಾಗ ಕೂಡಲೇ ಎಸ್‌ಪಿಗೆ ಕರೆ ಮಾಡಿ ಮಾತನಾಡಿದೆ. ಜೊತೆಗೆ ಸುತ್ತಮುತ್ತಲಿನ ಜನರನ್ನು ವಿಚಾರಿಸಿದೆವು. ಆಗ ಅವರು ಮುಸ್ಲಿಂ ಗೂಂಡಾಗಳೇ ಕೊಲೆ ಮಾಡಿದ್ದು ಎಂದಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಬೆಂಗಳೂರು (ಫೆ. 22): ಹರ್ಷ ಕೊಲೆಯಾದಾಗ ಕೂಡಲೇ ಎಸ್‌ಪಿಗೆ ಕರೆ ಮಾಡಿ ಮಾತನಾಡಿದೆ. ಜೊತೆಗೆ ಸುತ್ತಮುತ್ತಲಿನ ಜನರನ್ನು ವಿಚಾರಿಸಿದೆವು. ಆಗ ಅವರು ಮುಸ್ಲಿಂ ಗೂಂಡಾಗಳೇ ಕೊಲೆ ಮಾಡಿದ್ದು ಎಂದಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
Shivamogga Riots: ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಸ್ವಾಮಿ, ಹರ್ಷನ ತಾಯಿ ಕಣ್ಣೀರು
‘ನಮ್ಮ ಸಜ್ಜನ ಕಾರ್ಯಕರ್ತ ಹರ್ಷನನ್ನು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಎಂದೂ ಈ ಮುಸ್ಲಿಂ ಗೂಂಡಾಗಳು ಬಾಲಬಿಚ್ಚಿರಲಿಲ್ಲ. ಆದರೆ ಮೊನ್ನೆ ಶಿವಮೊಗ್ಗದ ಸರ್ಕಾರಿ ಶಾಲೆ ಆವರಣದಲ್ಲಿ ರಾಷ್ಟ್ರ ಧ್ವಜ ಇಳಿಸಿ ಭಗವಾ ಧ್ವಜ ಹಾರಿಸಿದ್ದಾರೆ. 50 ಲಕ್ಷ ಕೇಸರಿ ಶಾಲು ಹಂಚಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅವರು ನೀಡಿದ ಪ್ರಚೋದನಾಕಾರಿ ಹೇಳಿಕೆಯಿಂದ ಈ ಗೂಂಡಾಗಳಿಗೆ ಕುಮ್ಮಕ್ಕು ಸಿಕ್ಕಿದೆ’ ಎಂದು ಈಶ್ವರಪ್ಪ ಹೇಳಿದ್ದರು.
ಈ ಹೇಳಿಕೆಗೆ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಆರೋಪ ಮಾಡಿದ್ದರು. ' ಯುವಕನ ಕೊಲೆ ಸಂಬಂಧ ಪೊಲೀಸ್ ತನಿಖೆ ನಡೆಯುವ ಮುನ್ನವೇ ಈಶ್ವರಪ್ಪ ಅವರು, ಮುಸ್ಲಿಂ ಗೂಂಡಾಗಳು ಕೊಲೆಗೆ ಕಾರಣ ಎಂದು ಹೇಳಿರುವುದನ್ನು ನೋಡಿದರೆ, ಅವರಿಗೆ ಎಲ್ಲ ಬಗೆಯ ಮಾಹಿತಿ ಮೊದಲೇ ಗೊತ್ತಿತ್ತು ಎಂದು ಕಾಣುತ್ತದೆ. ಘಟನೆ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಬೇಕಿತ್ತು, ಘಟನೆ ಬಗ್ಗೆ ಪೊಲೀಸ್ ತನಿಖೆ ನಡೆಯದೇ ಈಶ್ವರಪ್ಪ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ, ಅವರಿಗೆ ಬಹುಶಃ ಸಂಪೂರ್ಣ ಮಾಹಿತಿ ಇತ್ತೆಂದು ಕಾಣುತ್ತದೆ ಎಂದಿದ್ದರು.