Shivamogga Riots: ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಸ್ವಾಮಿ, ಹರ್ಷನ ತಾಯಿ ಕಣ್ಣೀರು

 ಶಿವಮೊಗ್ಗ (Shivamogga) ಹಿಂದೂಪರ ಕಾರ್ಯಕರ್ತ ಹರ್ಷನನ್ನು ಕಳೆದುಕೊಂಡು ಅವರ ಕುಟುಂಬ ದುಃಖದಲ್ಲಿ ಮುಳುಗಿದೆ. ಮನೆ ಮಗನನ್ನು ನೆನೆದು ಹೆತ್ತವರು, ಸೋದರಿಯರು ಕಣ್ಣೀರಿಟ್ಟಿದ್ದಾರೆ. 

First Published Feb 22, 2022, 11:57 AM IST | Last Updated Feb 22, 2022, 11:59 AM IST

 ಬೆಂಗಳೂರು (ಫೆ. 22): ಶಿವಮೊಗ್ಗ ಹಿಂದೂಪರ ಕಾರ್ಯಕರ್ತ ಹರ್ಷನನ್ನು ಕಳೆದುಕೊಂಡು ಅವರ ಕುಟುಂಬ ದುಃಖದಲ್ಲಿ ಮುಳುಗಿದೆ. ಮನೆ ಮಗನನ್ನು ನೆನೆದು ಹೆತ್ತವರು, ಸೋದರಿಯರು ಕಣ್ಣೀರಿಟ್ಟಿದ್ದಾರೆ. 'ನಮ್ಮ ಮಗ ಹರ್ಷನ ಸಾವಿಗೆ ನ್ಯಾಯ ಕೊಡಿಸಿ. ಮತ್ತೆ ಹೀಗೆ ಆಗದಂತೆ ತಡೆಯಬೇಕು. ಯಾರಿಗೂ ಇಂತಹ ಸ್ಥಿತಿ ಯಾರಿಗೂ ಬರಬಾರದು. ನನ್ನ ಮಗ ಒಳ್ಳೆಯ ಕೆಲಸ ಮಾಡುತ್ತಿದ್ದ. ಅವನ ಕೆಲಸಕ್ಕೆ ಹೆಮ್ಮೆ ಆಗುತ್ತಿದೆ. ಇಂತಹ ಮಗ ಇನ್ನಷ್ಟು ಮಂದಿ ಹುಟ್ಟಬೇಕು' ಎಂದು ತಾಯಿ ಕಣ್ಣೀರು ಹಾಕಿದರು. 

Shivamogga Riots: ಹರ್ಷ ಮನೆಗೆ ಉಸ್ತುವಾರಿ ಸಚಿವ ನಾರಾಯಣ ಗೌ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ