Shivamogga: ನನ್ನ ಮಗ ತಪ್ಪು ಮಾಡಿಲ್ಲ, ಸುಮ್ಮನೆ ಅರೆಸ್ಟ್ ಮಾಡಿದ್ದಾರೆ: ಬಂಧಿತನ ತಾಯಿ ಆರೋಪ

ಹರ್ಷ ಹತ್ಯೆ ಪ್ರಕರಣ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ. ಎಲ್ಲರೂ ಶಿವಮೊಗ್ಗದವರೇ ಆಗಿದ್ದು, ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ. ಇದೇ ವೇಳೆ 12 ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

First Published Feb 23, 2022, 1:13 PM IST | Last Updated Feb 23, 2022, 1:16 PM IST

ಬೆಂಗಳೂರು (ಫೆ. 23): ಹರ್ಷ ಹತ್ಯೆ ಪ್ರಕರಣ (Harsha Murder Case) ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ. ಎಲ್ಲರೂ ಶಿವಮೊಗ್ಗದವರೇ ಆಗಿದ್ದು, ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ. ಇದೇ ವೇಳೆ 12 ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Harsha Murder Case: ಪೊಲೀಸರ ಭರ್ಜರಿ ಬೇಟೆ: ಸೈತಾನರ ಸೈನ್ಯದ ಹುಡುಕಾಟದ ರೋಚಕ ತನಿಖೆ

'ಪ್ರಕರಣ ಸಂಬಂಧ ಮೊದಲು ಬಂಧಿತನಾದ ನದೀಮ್ ತಪ್ಪು ಮಾಡಿಲ್ಲ. ಯಾರನ್ನೋ ತೋರಿಸು ಎಂದು ಪೊಲೀಸರು ಕರೆದುಕೊಂಡು ಹೋದರು. ಈಗ ನದೀಮ್ ಕೊಲೆ ಮಾಡಿದ್ದಾನೆ ಎಂದು ಕೇಸ್ ಹಾಕಿದ್ದಾರೆ. ನನ್ನ ಮಗ ಈ ಕೊಲೆ ಮಾಡಿಲ್ಲ. ಆ ಕೊಲೆಯಾಗುವಾಗ ನನ್ನ ಮಗ ಮನೆಯಲ್ಲೇ ಇದ್ದ. ನಾವು ಪೊಲೀಸ್ ಸ್ಟೇಷನ್‌ಗೆ ಹೋಗಿ ವಿಚಾರಿಸಿದೆವು. ಆದರೆ ಮಗ ಎಲ್ಲಿದ್ದಾನೆ ಎಂದು ನಮಗೆ ಹೇಳುತ್ತಿಲ್ಲ' ಎಂದು ತಾಯಿ ಪರ್ವೀನ್ ಅಳಲು ತೋಡಿಕೊಂಡಿದ್ದಾರೆ.