
ಆತನ ಬಾಯಿಗೆ ನಡುಗಿತು ಬ್ರಹ್ಮಾವರ ಸ್ಟೇಷನ್..! ಧರ್ಮಸ್ಥಳ ವಿರೋಧಿ ಗ್ಯಾಂಗ್ನ ಮುಂದಿನ ನಡೆ ಏನು?
ಧರ್ಮಸ್ಥಳ ವಿರೋಧಿ ಗ್ಯಾಂಗ್ನ ಲೀಡರ್ ತಿಮರೋಡಿ ಮತ್ತು AI ವಿಡಿಯೋಗಳಿಂದ ಜನರನ್ನು ಹುಚ್ಚೆಬ್ಬಿಸಿದ ಅವನ ಶಿಷ್ಯನ ಕಥೆ. ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿಯಲು ಯತ್ನಿಸಿದ ಇವರಿಬ್ಬರ ಬಣ್ಣ ಈಗ ಬಯಲಾಗಿದೆ. ಸುಜಾತಾ ಭಟ್ಳ ಷಡ್ಯಂತ್ರ ವಿಫಲವಾಗಿದೆ. ಇವರ ಮುಂದಿನ ನಡೆ ಏನು?
ಆತ ಧರ್ಮಸ್ಥಳ ವಿರೋಧಿ ಗ್ಯಾಂಗ್ನ ಲೀಡರ್.. ಧರ್ಮಸ್ಥಳಕ್ಕೇ ಜೆಸಿಬಿ ನುಗ್ಗಿಸುತ್ತೇನೆ ಅಂದವನು.. ಇವತ್ತು ಅವನದ್ದೇ ಹರಕಲು ಬಾಯಿಯಿಂದ ಪೊಲೀಸರ ಅತಿಥಿಯಾಗಿದ್ದಾನೆ.. ಇನ್ನೂ ಮತ್ತೊಬ್ಬ ಅವನ ಶಿಷ್ಯ.. AI ವಿಡಿಯೋಗಳಿಂದಲೇ ಏನೂ ಗೊತ್ತಿಲ್ಲದ ಜನರನ್ನ ಹುಚ್ಚೆಬ್ಬಿಸಿದ್ದ.. ಇವರಿಬ್ಬರೂ ಸೇರಿಕೊಂದು ಧರ್ಮಸ್ಥಳಕ್ಕೆ ಹೇಗೆಲ್ಲಾ ಕಪ್ಪು ಮಸಿ ಬಳೆಯಬಹುದೋ ಹಾಗೆಲ್ಲಾ ಬಳೆದುಬಿಟ್ಟಿದ್ರು.. ಆದ್ರಿವತ್ತು ಅದೇ ಗ್ಯಾಂಗ್ನ ಲೀಡರ್ ಅರೆಸ್ಟ್ ಆದ್ರೆ ಮತ್ತೊಬ್ಬ ಎಸ್ಕೆಪ್ ಆಗಿ ಕೋರ್ಟ್ ಮೊರೆ ಹೋಗಿದ್ದ.. ಸದ್ಯ ಜಾಮೀನು ಪಡೆದುಕೊಂಡಿದ್ದಾನೆ.. ಅಷ್ಟಕ್ಕೂ ಅವರಿಬ್ಬರ ಮೇಲೆ ಪೊಲೀಸರ ಕಣ್ಣು ಬಿದ್ದಿದ್ದೇಕೆ..? ಈ ಹರಕಲು ಬಾಯಿಯ ತಿಮರೋಡಿ ಇವತ್ತು ಮಾಡಿದ ಹೈಡ್ರಾಮ ಹೇಗಿತ್ತು.? ಇದೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್
ಒಂದೆಡೆ ಬುರುಡೆ ಗ್ಯಾಂಗ್ಗೆ ಕಾನೂನು ಕುಣಿಕೆ ಬಿಗಿಯಾಗುತ್ತಿದ್ರೆ, ಮತ್ತೊಂದೆಡೆ ಧರ್ಮಸ್ಥಳದ ಪರ ರಾಜ್ಯವ್ಯಾಪಿ ಬೆಂಬಲ ವ್ಯಕ್ತವಾಗುತ್ತಿದೆ. ಇನ್ನೂ ತಿಮರೋಡಿ ಮತ್ತು ಸಮೀರ್ ಕಥೆ ಇದಾದ್ರೆ ಇನ್ನೂ ಮ್ಯಾಜಿಕ್ ಅಜ್ಜಿ ಸುಜಾತಾ ಭಟ್ ಕಥೆ ಇನ್ನೂ ಬಾಕಿ ಇದೆ.. ಈ ಬಗ್ಗೆ ಮತ್ತಷ್ಟು ರೋಚಕ ಸಂಗತಿಗಳನ್ನ ನಮ್ಮ ಟೀಂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರತಂದಿದೆ.
ನನ್ನ ಮಗಳ ಅಸ್ತಿಪಂಜರ ಹುಡುಕಿಕೊಡಿ ಅಂತ ಬಂದಿದ್ದ ಸುಜಾತಾ ಭಟ್ ಅಸಲಿಯತ್ತನ್ನ ನಾವೇ ಬಯಲು ಮಾಡಿದ್ದೇವೆ.. ಯಾರದ್ದೋ ಫೋಟೋ ತಂದು ನನ್ನ ಮಗಳು ಅಂದಿದ್ದ ಸುಜಾತಾ ಭಟ್ಳ ಪ್ರತಿಯೊಂದು ಷಡ್ಯಂತ್ರ ಕೂಡ ಈಗ ವಿಫಲವಾಗಿದೆ.. ಆದ್ರೆ ಈಗ ಇಲ್ಲದೇ ಇರೋ ಅನನ್ಯ ಭಟ್ ಕ್ಯಾರೆಕ್ಟರ್ ಹುಟ್ಟಿಕೊಂಡಿದ್ದು ಎಲ್ಲಿ ಮತ್ತು ಹೇಗೆ ಅನ್ನೋ ವಿಷಯ ಕೂಡ ಬಯಲಾಗಿದೆ.. ಐನಾತಿ ಅಜ್ಜಿ ಕಥೆ ಹೇಳಿದ್ರೆ.. ತಿಮರೋಡಿ ಚಿತ್ರಕಥೆ ಬರೆದಿದ್ದ ಇನ್ನೂ AI ಸಮೀರ ಕಥೆಗೆ ಗ್ರಾಫಿಕ್ಸ್ ಟಚ್ ಕೊಟ್ಟಿದ್ದ.. ಅಷ್ಟೇ ಅಲ್ಲ.. ಸಾವಿರಾರು ಹೆಣಗಳನ್ನ ಹೂತಿದ್ದೇನೆ ಅಂತ ಬಂದಿರೋ ಅನಾಮಿಕನ ಬಣ್ಣವೂ ಬಯಲಾಗಿದೆ.
ಬುರುಡೆ ಬಯಲಾಟದಲ್ಲಿ ಪಾತ್ರಧಾರಿಗಳ ಅಸಲಿಯತ್ತು ಈಗ ಹೊರಬರುತ್ತಿದೆ. ಈ ಕಪಟ ನಾಟಕಕ್ಕೆ ತೆರೆ ಬೀಳುವ ಎಲ್ಲ ಲಕ್ಷಣಗಳು ಕಾಣ್ತಿವೆ.. ಟೆಂಪಲ್ಟೌನ್ ಮೇಲೆ ಕವಿದಿದ್ದ ಅಪಪ್ರಚಾರ, ಗುಮಾನಿಗಳ ಕಾರ್ಮೋಡ ಸರಿದು ಸತ್ಯದರ್ಶನವಾಗಲಿ.. ಭಕ್ತರ ಆತಂಕ, ದುಗುಡಗಳೆಲ್ಲ ದೂರವಾಗಲಿ ಈ ಎಲ್ಲದರ ಸಂಪೂರ್ಣ ಡಿಟೇಲ್ ವೀಡಿಯೋದಲ್ಲಿದೆ ನೋಡಿ.