ಹಿಜಾಬ್, ಹಲಾಲ್ ನಡುವೆ ಮತ್ತೊಂದು ಅಭಿಯಾನ: ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ಬ್ಯಾನ್ ಕೂಗು
ಹಿಜಾಬ್, ಹಲಾಲ್, ಆರ್ಥಿಕ ನಿರ್ಬಂಧದ ಬಳಿಕ ಹಿಂದೂಪರ ಸಂಘಟನೆಗಳು ಇದೀಗ ವಕ್ಫ್ಬೋರ್ಡ್ ಮತ್ತು ವಕ್ಫ್ ಬೋರ್ಡ್ ಕಾನೂನಿನ ವಿರುದ್ಧ ಅಭಿಯಾನಕ್ಕೆ ಮುಂದಾಗಿದೆ.
ಬೆಳಗಾವಿ (ಏ. 09): ಹಿಜಾಬ್, ಹಲಾಲ್, ಆರ್ಥಿಕ ನಿರ್ಬಂಧದ ಬಳಿಕ ಹಿಂದೂಪರ ಸಂಘಟನೆಗಳು ಇದೀಗ ವಕ್ಫ್ಬೋರ್ಡ್ ಮತ್ತು ವಕ್ಫ್ ಬೋರ್ಡ್ ಕಾನೂನಿನ ವಿರುದ್ಧ ಅಭಿಯಾನಕ್ಕೆ ಮುಂದಾಗಿದೆ.
1991ರಲ್ಲಿ ಕಾಂಗ್ರೆಸ್ ಪ್ರಾರಂಭ ಮಾಡಿದ ವಕ್ಫ್ ಕಾನೂನು ಇಡೀ ದೇಶದಲ್ಲಿ ವಕ್ಫ್ಬೋರ್ಡ್ ಆಸ್ತಿ ಇರುವುದು. ನಂಬರ್ ಒನ್ ರೇಲ್ವೆ ಮತ್ತು ಮಿಲಿಟರಿ ವಿಭಾಗದ ಆಸ್ತಿ, ಎರಡನೇ ಸ್ಥಾನದಲ್ಲಿ ವಕ್ಫ್ ಬೋರ್ಡ್‌ದ್ದು ಇದೆ. ವಕ್ಫ್ ಬೋರ್ಡ್ ಬಗ್ಗೆ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸುತ್ತೇನೆ. ಯಾವ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್‌ಗೆ ಸೇರಿಕೊಂಡಿದೆ ಎಂಬ ಬಗ್ಗೆ ಆರ್‌ಟಿಐನಲ್ಲಿ ದಾಖಲೆ ತೆಗೆದುಕೊಂಡಿದ್ದು ದೊಡ್ಡ ಅಭಿಯಾನ ಮಾಡಲಾಗುವುದು. ಎವ್ವ ದಾಖಲೆಗಳನ್ನು ಸುಪ್ರೀಂ ಕೋರ್ಚ್‌ಗೆ ಸಲ್ಲಿಸುತ್ತೇವೆ. ವಕ್ಫ್ ಬೋರ್ಡ್ ಕಾನೂನು ಹಿಂಪಡೆಯುವಂತೆ ಒತ್ತಾಯ ಮಾಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.