ಆರಂಭವಾಗಿದ್ದು ಹೇಗೆ ಗೊತ್ತಾ ಹುಲಿ ಆಟ..? ಏನು ಹೇಳುತ್ತೆ ವನ್ಯಜೀವಿ ರಕ್ಷಣಾ ಅಧಿನಿಯಮ..?

ಹುಲಿ ಉಗುರು ಧರಿಸಿದ್ದು ಸಾಬೀತಾದಲ್ಲಿ ಏನು ಶಿಕ್ಷೆ..?
ಸಂಚಲನ ಸೃಷ್ಟಿಸಿದ್ದೇಕೆ ಹುಲಿ ಉಗುರಿನ ಪ್ರಕರಣ..?
ಹುಲಿ ಉಗುರು ಪ್ರಕರಣದಿಂದ ಆಗಿದ್ದೇನು ಗೊತ್ತಾ.?

Share this Video
  • FB
  • Linkdin
  • Whatsapp

ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೂ ಹುಲಿ ಉಗುರು(Tiger claw pendant) ಕಂಟಕ ಶುರುವಾಗಿದೆ. ಫೋಟೋಗಳು ವೈರಲ್ ಆಗ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ. ಹುಲಿ ಉಗುರು ಲಾಕೆಟ್ ಧರಿಸಿ ವರ್ತೂರು ಸಂತೋಷ್ (Varthur Santhosh)ಬಂಧನಕ್ಕೊಳಗಾದ್ರು. ಈಗ ಇದರ ಬೆನ್ನಲ್ಲೇ ನಿರೀಕ್ಷಿಸೋಕು ಸಾಧ್ಯವಾಗದ ಮಟ್ಟದಲ್ಲಿ ಈ ಪ್ರಕರಣ ಬೆಳಿತಿದೆ. ಅಕ್ಟೋಬರ್ 23ಕ್ಕೆ ಬಿಗ್‌ಬಾಸ್‌ ಸ್ಪರ್ಧಿಯನ್ನ ಅರಣ್ಯಾಧಿಕಾರಿಗಳು, ವೈಲ್ಡ್‌ಲೈಫ್‌ ಪ್ರೊಟೆಕ್ಷನ್ ಆ್ಯಕ್ಟ್‌ನಡಿ(Wildlife Protection Act)ಬಂಧಿಸಿದ್ರು. 2ನೇ ACJM ಕೋರ್ಟ್ ಸಂತೋಷ್ ಅವರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡ್ತು. ವರ್ತೂರು ಸಂತೋಷ್ ಅವರ ಬಂಧನ ವಿರೋಧಿಸಿ ಪ್ರೊಟೆಸ್ಟ್ ಮಾಡಿದೋರೆಲ್ಲಾ, ಹುಲಿ ಉಗುರು ಧರಿಸಿದ ನಟರನ್ನೂ ಅರೆಸ್ಟ್ ಮಾಡಿ ಅಂತ ಆಗ್ರಹ ಮಾಡಿದ್ರು. ಇನ್ನೊಂದ್ ಕಡೆ, ಹಲವಾರು ಸೆಲೆಬ್ರಿಟಿಗಳು ಕೊರಳಲ್ಲಿ ಹುಲಿ ಉಗರನ್ನೇ ಹೋಲುವ ಲಾಕೆಟ್ ಹಾಕ್ಕೊಂಡಿರೋ ಫೋಟೋಗಳು ವೈರಲ್ ಆದ್ವು. ಈಗ ಅವರ ವಿರುದ್ಧ ಒಂದೊಂದಾಗೇ ಕೇಸುಗಳು ದಾಖಲಾಗ್ತಾ ಇದಾವೆ. ಸರ್ಕಾರವೂ ಕೂಡ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಳೆದಿದೆ. ಯಾರೇ ಅಪರಾಧ ಮಾಡಿದ್ರೂ, ಅವರ ವಿರುದ್ಧ ಕಾನೂನು ಬದ್ಧ ಕ್ರಮಕೈಗೊಳ್ತೀವಿ ಅಂತಾರೆ, ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ರಾಮನಗರದಿಂದ ಬೇರ್ಪಡುತ್ತಾ ಕನಕಪುರ..? ಮಾಜಿ ಸಿಎಂನ ಮಾಜಿ ಭದ್ರಕೋಟೆ ಮೇಲೆ ಇಬ್ಭಾಗಾಸ್ತ್ರ..?

Related Video