ಮೈಸೂರಿನಲ್ಲಿ ಸೋಂಕು ಇಳಿಕೆ, ಲಾಕ್‌ಡೌನ್ ತೆರವು ಇಂಗಿತ ವ್ಯಕ್ತಪಡಿಸಿದ ಎಸ್‌ಟಿ ಸೋಮಶೇಖರ್
- ಮೈಸೂರಿನಲ್ಲಿ ಸೋಂಕು ಇಳಿಕೆ, ಲಾಕ್‌ಡೌನ್ ತೆರವಿಗೆ ಎಸ್‌ಟಿಎಸ್ ಒಲವು
- ಆಶಾ ಕಾರ್ಯಕರ್ತೆಯರಿಂದ ಸರ್ವೆ
- ಜೂನ್ 7 ನಂತರ ಸೋಂಕು ಇನ್ನಷ್ಟು ಇಳಿಕೆ
ಬೆಂಗಳೂರು (ಮೇ. 30): 'ಜನರ ಜೀವ ಎಷ್ಟು ಮುಖ್ಯವೋ, ಜೀವನ ಕೂಡಾ ಅಷ್ಟೇ ಮುಖ್ಯ. ಜೀವ, ಜೀವನ ಎರಡನ್ನೂ ಕಾಪಾಡುವುದು ನಮ್ಮ ಕರ್ತವ್ಯ. ಹಾಗಾಗಿ ಲಾಕ್‌ಡೌನ್ ಕಡಿತ ಮಾಡುವ ಇಂಗಿತ ವ್ಯಕ್ತಪಡಿಸಿದ್ದೇನೆ' ಎಂದು ಮೈಸೂರು ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸೋಂಕು ಇಳಿಕೆಯಾಗುತ್ತಿದೆ. ಆಶಾ ಕಾರ್ಯಕರ್ತೆಯರು ಸರ್ವೆ ಮಾಡುತ್ತಿದ್ದಾರೆ. ಯಾರಿಗಾದರೂ ಲಕ್ಷಣ ಕಂಡು ಬಂದ್ರೆ ಕೋವಿಡ್ ಮಿತ್ರ ಆಸ್ಪತ್ರೆಗೆ ದಾಖಲಿಸುತ್ತೇವೆ. ಇದುವರೆಗೂ ಜನರು ಲಾಕ್‌ಡೌನ್‌ಗೆ ಸ್ಪಂದಿಸಿದ್ದಾರೆ. ಜೀವನವೂ ಮುಖ್ಯವಾಗಿರುವುದರಿಂದ ಸೋಂಕು ಇಳಿಯುತ್ತಿದ್ದಂತೆ ಲಾಕ್‌ಡೌನ್ ಕಡಿತ ಮಾಡುತ್ತೇವೆ' ಎಂದು ಸೋಮಶೇಖರ್ ಹೇಳಿದ್ದಾರೆ.