
ತುಮಕೂರಿಗೆ ಕಂಟಕವಾದ ಪಾದರಾಯನಪುರದ ಆಸಾಮಿ..!
ತುಮಕೂರಿನವರ ಪಾಲಿಗೆ ಪಾದರಾಯನಪುರದ ವ್ಯಕ್ತಿ ಕಂಟಕವಾಗಿ ಪರಿಣಮಿಸಿದ್ದಾನೆ. ಸ್ಥಳೀಯ ಮಾಹಿತಿಯ ಮೇರೆಗೆ ಆ ವ್ಯಕ್ತಿಯನ್ನು ಪತ್ತೆಹಚ್ಚಿ ತಪಾಸಣೆಗೆ ಒಳಪಡಿಸಿದಾಗ ಆತನಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿದೆ.
ತುಮಕೂರು(ಮೇ.09): ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ತುಮಕೂರಿನ ಶಿರಾಗೆ ಪಾದಾರಾಯನಪುರದ ವ್ಯಕ್ತಿ ಎಸ್ಕೇಪ್ ಆಗಿದ್ದ, ಇದೀಗ ಆ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೇ.04ರ ರಾತ್ರಿ ಶಿರಾದ ಸಂಬಂಧಿಕರ ಮನೆಗೆ ಪಾದರಾಯನಪುರದ ವ್ಯಕ್ತಿ ಭೇಟಿ ನೀಡಿದ್ದ ಎನ್ನುವ ಆತಂಕಕಾರಿ ವಿಚಾರ ಬಯಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದೀಗ ತುಮಕೂರಿನವರ ಪಾಲಿಗೆ ಪಾದರಾಯನಪುರದ ವ್ಯಕ್ತಿ ಕಂಟಕವಾಗಿ ಪರಿಣಮಿಸಿದ್ದಾನೆ. ಸ್ಥಳೀಯ ಮಾಹಿತಿಯ ಮೇರೆಗೆ ಆ ವ್ಯಕ್ತಿಯನ್ನು ಪತ್ತೆಹಚ್ಚಿ ತಪಾಸಣೆಗೆ ಒಳಪಡಿಸಿದಾಗ ಆತನಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆ..!
ಶಿರಾಗೆ ಭೇಟಿ ಕೊಟ್ಟಿದ್ದ ವ್ಯಕ್ತಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತತ್ತು. ಕೊರೋನಾ ಟೆಸ್ಟ್ ನಡೆಸಿದ ಬಳಿಕ ಆತನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈ ಕುರಿತಾದ ಮತ್ತಷ್ಟು ಡೀಟೈಲ್ಸ್ ಇಲ್ಲಿದೆ ನೋಡಿ.