Asianet Suvarna News Asianet Suvarna News

ಹುಲಿಗಳ ಸಂರಕ್ಷಣೆಯಲ್ಲಿ ‘ಕರ್ನಾಟಕ’ ದಿ ಬೆಸ್ಟ್‌: ಮಧ್ಯಪ್ರದೇಶ ಫಸ್ಟ್‌.. ಕರ್ನಾಟಕಕ್ಕೆ 2ನೇ ಸ್ಥಾನ !

ನಾಗರಹೊಳೆಯಲ್ಲಿ 149, ಬಂಡೀಪುರದಲ್ಲಿ 143 ಹುಲಿಗಳು..!
ವನ್ಯಜೀವಿ ತಜ್ಞರು ಪ್ರಕಾರ 570 ರಿಂದ 620 ಹುಲಿಗಳಿರುವ ಶಂಕೆ 
ರಾಜ್ಯವಾರು ಹುಲಿ ಗಣತಿಯಲ್ಲಿ 222 ಹುಲಿಗಳ ವ್ಯತ್ಯಾಸ..!

ಜುಲೈ 29 ಅಂತಾರಾಷ್ಟ್ರೀಯ ಹುಲಿ ದಿನ(International Tiger Day). ಪರಿಸರ ನಾಶ, ಹುಲಿಯ ಕಳ್ಳಬೇಟೆ, ಅಭಿವೃದ್ಧಿಯ ಹೆಸರಿನಲ್ಲಿ ಹುಲಿಯ ಸಂತತಿ ಅಳುವಿನಂಚಿನತ್ತ ಸಾಗುತ್ತಿದೆ. ಕ್ಷೀಣಿಸುತ್ತಿರುವ ಹುಲಿಗಳ (Tigers) ಸಂಖ್ಯೆಯ ಕುರಿತಾಗಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ. ದೇಶದ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಯ ಬಗ್ಗೆ ನಾಲ್ಕು ವರ್ಷಕ್ಕೊಮ್ಮೆ  ಗಣತಿ ಮಾಡಲಾಗುತ್ತದೆ. ಮಧ್ಯಪ್ರದೇಶದಲ್ಲಿ 785, ಕರ್ನಾಟಕದಲ್ಲಿ 563, ಉತ್ತರಖಾಂಡ್‌ನಲ್ಲಿ 560 ಹುಲಿಗಳಿವೆ. 2018ರಲ್ಲಿ ಹುಲಿ ಗಣತಿ(Tiger census) ಪ್ರಕಾರ ಕರ್ನಾಟಕದಲ್ಲಿ 524 ಹುಲಿಗಳಿದ್ವು, ಮಧ್ಯ ಪ್ರದೇಶದಲ್ಲಿ 526 ಹುಲಿಗಳಿದ್ವು, ಜಸ್ಟ್ ಎರಡೇ ಎರಡು ಹುಲಿಗಳ ವ್ಯತ್ಯಾಸವಿತ್ತು. ಆದರೆ ಈ ಬಾರಿಯ ಹುಲಿ ಗಣತಿಯಲ್ಲಿ 222 ಹುಲಿಗಳ ವ್ಯತ್ಯಾಸ ಕಾಣುತ್ತಿರುವುದು. ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ರಾಜ್ಯದ ಐದು ಹುಲಿ ಸಂರಕ್ಷಿತ ತಾಣಗಳಲ್ಲಿ ನಾಗರಹೊಳೆ ಮುಂಚೂಣಿಯ ಸ್ಥಾನದಲ್ಲಿದೆ. ನಾಗರಹೊಳೆಯಲ್ಲಿ 149 ಹುಲಿಗಳಿದ್ದು, ಬಂಡೀಪುರದಲ್ಲಿ 143 ಹುಲಿಗಳಿದೆ ಅಂತ ವರದಿ ಬಿಡುಗಡೆಯಾಗಿದೆ. 

ಇದನ್ನೂ ವೀಕ್ಷಸಿ:  Today Horoscope: ತುಲಾ ರಾಶಿಯವರಿಗೆ ಇಂದು ಲಾಭದ ದಿನ..ಸಲಹೆಗಳಿಂದ ಕಾರ್ಯಕ್ಕೆ ಹಾನಿಯಾಗುವ ಸಾಧ್ಯತೆ

Video Top Stories