News Hour: ಗೃಹಜ್ಯೋತಿ ಗ್ಯಾರಂಟಿ ಗೊಂದಲ ಕೊನೆಗೂ ಕ್ಲಿಯರ್‌!

ಗೃಹಜ್ಯೋತಿ ವಿಚಾರವಾಗಿ ಇಂದು ರಾಜ್ಯದಲ್ಲಿ ಸಾಕಷ್ಟು ಗೊಂದಲ ನಿರ್ಮಾಣವಾಗಿತ್ತು. ಇಂಧನ ಸಚಿವ ಕೆಜೆ ಜಾರ್ಜ್‌ ಹೇಳಿದ್ದ ಮಾತಿನಿಂದ ಜನರು ಗೊಂದಲಕ್ಕೆ ಒಳಗಾದರೆ, ಬಳಿಕ ಸಿದ್ಧರಾಮಯ್ಯ ಇದಕ್ಕೆ ಸ್ಪಷ್ಟನೆ ನೀಡಿ ಎಲ್ಲವನ್ನೂ ಕ್ಲಿಯರ್‌ ಮಾಡಿದರು.
 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ.6): ಇಂಧನ ಸಚಿವ ಕೆಜೆ ಜಾರ್ಜ್‌ ಹೇಳಿದ ಒಂದು ಹೇಳಿಕೆ ಗೃಹಜ್ಯೋತಿ ಯೋಜನೆಯಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಕೊನೆಗೆ ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಸ್ಪಷ್ಟನೆ ನೀಡಿದರು. ಇದರಿಂದಾಗಿ ಬಾಡಿಗೆದಾರರು ಪವರ್‌ ಶಾಕ್‌ನಿಂದಾಗಿ ತಪ್ಪಿಸಿಕೊಂಡಿದ್ದಾರೆ.

ಗೃಹಜ್ಯೋತಿ ಉಚಿತ ವಿದ್ಯುತ್‌ ವಿಚಾರವಾಗಿ ಉಂಟಾದ ಗೊಂದಲಕ್ಕೆ ಕೊನೆಗೂ ಸರ್ಕಾರ ಸ್ಪಷ್ಟನೆ ನೀಡಿದೆ. ಅಷ್ಟರಲ್ಲಾಗಲೇ ವಿರೋಧ ಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಜೆಡಿಎಸ್‌ ನಾಯಕ ಎಚ್‌ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರುಗಳು ಹೇಳಿದ ರೀತಿಯಲ್ಲಿ ಗ್ಯಾರಂಟಿ ಪೂರೈಕೆ ಮಾಡಿ ಎಂದು ಆಗ್ರಹಿಸಿದ್ದಾರೆ.

ಬಾಡಿಗೆದಾರರಿಗೆ ಗುಡ್‌ ನ್ಯೂಸ್‌ ..!: ಫ್ರೀ ವಿದ್ಯುತ್‌ ಗೊಂದಲಕ್ಕೆ ತೆರೆ ಎಳೆದ ಸಿಎಂ ಸಿದ್ದರಾಮಯ್ಯ ..!

ಗೃಹಜ್ಯೋತಿ ವಿಚಾರದಲ್ಲಿ ಉಂಟಾದ ಗೊಂದಲಕ್ಕೆ ಸ್ವತಃ ಸಿಎಂ ಸಿದ್ಧರಾಮಯ್ಯ ಕೊನೆಗೆ ಸ್ಪಷ್ಟನೆ ನೀಡಿದರು. 200 ಯುನಿಟ್‌ ಒಳಗೆ ಯಾರೆಲ್ಲಾ ವಿದ್ಯುತ್‌ ಬಳಕೆ ಮಾಡ್ತಾರೋ ಅವರೆಲ್ಲರಿಗೂ ಉಚಿತ ವಿದ್ಯುತ್‌ ನೀಡಲಿದ್ದೇವೆ. ಇದರಲ್ಲಿ ಮನೆ ಮಾಲೀಕರು, ಬಾಡಿಗೆ ಮನೆಯವರು ಎಲ್ಲರೂ ಇರಲಿದ್ದಾರೆ ಎಂದು ತಿಳಿಸಿದ್ದಾರೆ.

Related Video