Asianet Suvarna News Asianet Suvarna News

ಬಾಡಿಗೆದಾರರಿಗೆ ಗುಡ್‌ ನ್ಯೂಸ್‌ ..!: ಫ್ರೀ ವಿದ್ಯುತ್‌ ಗೊಂದಲಕ್ಕೆ ತೆರೆ ಎಳೆದ ಸಿಎಂ ಸಿದ್ದರಾಮಯ್ಯ ..!

ಬಾಡಿಗೆದಾರರಿಗೂ 200 ಯುನಿಟ್‌ ವಿದ್ಯುತ್ ಫ್ರೀ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 

ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಾತನಾಡಿ, ಬಾಡಿಗೆದಾರರಿಗೂ 200 ಯುನಿಟ್‌ ವಿದ್ಯುತ್‌ ಉಚಿತ ಕೊಡುತ್ತೇವೆ. ಯಾರು 200 ಯುನಿಟ್‌ಯೊಳಗೆ ಉಪಯೋಗ ಮಾಡುತ್ತಾರೋ ಅವರ್ಯಾರು  ಕೂಡ ಬಿಲ್‌ ಕಟ್ಟಬೇಕಾಗಿಲ್ಲ ಎಂದು ಸಿಎಂ ಹೇಳಿದ್ದಾರೆ. ಕಾಂಗ್ರೆಸ್‌ ನ ಗೃಹಜ್ಯೋತಿ ಯೋಜನೆಯಡಿ 200 ಯುನಿಟ್‌ ವಿದ್ಯುತ್‌ ಉಚಿತ ಗ್ಯಾರಂಟಿ ಘೋಷಣೆಯಲ್ಲಿ ಹಲವು ಗೊಂದಲಗಳಿಗೆ ಎಡೆಮಾಡಿಕೊಟ್ಟಿತ್ತು. ಇದೀಗ ಅದಕ್ಕೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಯಾರು ಬಡವರು ಇದ್ದಾರೆ, ಅವರು 200 ಯೂನಿಟ್‌ ಒಳಗೆ ವಿದ್ಯುತ್‌ ಬಳಕೆ ಮಾಡಿದ್ರೆ, ಅವರು ಬಿಲ್‌ ಕಟ್ಟಬೇಕಿಲ್ಲ. ಈ ಯೋಜನೆ ಬಾಡಿಗೆದಾರರಿಗೂ ಅನ್ವಯ ಆಗುತ್ತೆ. ಇನ್ನೂ ಈ ಯೋಜನೆ ವಾಣಿಜ್ಯವಾಗಿ ಬಳಕೆ ಮಾಡುವವರಿಗೆ ಅನ್ವಯ ಆಗಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ವೀಕ್ಷಿಸಿ: ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ: ಬಸ್‌ ಮಾರಾಟಕ್ಕಿದೆ ಎಂದು ಪೋಸ್ಟರ್ !