ತದ್ವನಂ ಸಂಸ್ಥೆಯ ಹಿಂದಿನ ರೂವಾರಿ ಯಾರು ಗೊತ್ತಾ ?: ಹಳ್ಳಿಯಿಂದ ದೆಲ್ಲಿವರೆಗೆ ಆಹಾರೋತ್ಷನ್ನಗಳ ಮಾರಾಟ !
ಸಿರಿಧಾನ್ಯಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸಿದ ತದ್ವನಂ ಸಂಸ್ಥೆ
ಮಲೇಬೆನ್ನೂರಿನ ನಿಟ್ಟೂರಿನಲ್ಲಿ ಆರಂಭವಾದ ತದ್ವನಂ ಕಂಪನಿ
ಸಿರಿಧಾನ್ಯ ಬಳಸಿ ತಯಾರಿಸಿದ 38 ಬಗೆಯ ಉತ್ಪನ್ನಗಳು ಲಭ್ಯ!
ದಾವಣಗೆರೆ: ದೇಶದ ಹಳ್ಳಿ ಮೂಲೆಯಲ್ಲಿ ಹುಟ್ಟಿಕೊಂಡ ಆಹಾರೋತ್ಪನ್ನಗಳು ಇಂದು ದೇಶವನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ದಾವಣಗೆರೆ (davanagere) ಜಿಲ್ಲೆಯ ಮಲೇಬೆನ್ನೂರು ಹೋಬಳಿಯ ನಿಟ್ಟೂರಿನಲ್ಲಿ ಆರಂಭವಾದ ತದ್ವನಂ ಸಂಸ್ಥೆ(Tadvanam Institute) ಆಹಾರೋತ್ಪನ್ನ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸಿದೆ. ಸಿರಿಧಾನ್ಯಗಳು, ಬಾಳೆ ಕಾಯಿ ಮತ್ತು ಹಣ್ಣುಗಳಿಂದ ವೈವಿಧ್ಯಮಯ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿರುವ ತದ್ವನಂ ಕಂಪನಿಯು ನಿರೀಕ್ಷೆಗೂ ಮೀರಿ ಆದಾಯ ಗಳಿಸುತ್ತಿದೆ. ಸಿರಿಧಾನ್ಯಗಳಿಂದ 38 ಬಗೆಯ ಉತ್ಪನ್ನಗಳು, ಖಾದ್ಯಗಳು, ಬಾಳೆಹಣ್ಣಿನಿಂದ ಶಾವಿಗೆ, ಕಾಯಿಯಿಂದ ಚಿಪ್ಸ್, ಸೂಪ್ ಪೌಡರ್ ರೆಡಿ ಮಿಕ್ಸ್, ಹಪ್ಪಳ, ಮಾಲ್ಟ್ ಪೌಡರ್ ತಯಾರಿಸಿ ಮಾರಾಟ ಮಾಡುತ್ತಿರುವ ಹರಿಹರ ತಾಲ್ಲೂಕಿನ ರೈತ ಮಹಿಳೆ ಇಂದು ಇತರರಿಗೆ ಮಾದರಿಯಾಗಿದ್ದಾರೆ.
ತದ್ವನಂ ಸಂಸ್ಥೆಯ ಹಿಂದಿನ ರೂವಾರಿ ಸರೋಜಾ ಪಾಟೀಲ್( Saroja Patil) ಸಿರಿಧಾನ್ಯಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ದಾವಣಗೆರೆಯಲ್ಲಿ ಮಾತ್ರವಲ್ಲದೇ ದೂರದ ದೆಹಲಿ, ಗೋವಾ ,ಮೈಸೂರು, ಬೆಂಗಳೂರಿನಲ್ಲೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಶನಿವಾರ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುವ ಸಂತೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಹೊಸ ಪ್ರಯೋಗದ ಫಲವಾಗಿ ‘ಬಾಳೆಕಾಯಿ ಹುಡಿ ವಿವಿಧ ಖಾದ್ಯ ರೂಪದಲ್ಲಿ ಅಡುಗೆ ಮನೆ ಪ್ರವೇಶಿಸುತ್ತಿದ್ದು, ಕಿರು ಉದ್ಯಮದ ಸ್ವರೂಪ ಪಡೆಯುತ್ತಿದೆ. ಹುಡಿಯನ್ನು ಚಪಾತಿ, ಥಾಲಿಪಟ್ಟು, ರೊಟ್ಟಿ, ವಡೆ, ದೋಸೆ, ಪಡ್ಡು, ಇಡ್ಲಿಗಳ ಜೊತೆ ಮಿಶ್ರಣ ಮಾಡಿ ಸೇವಿಸಿದರೆ ಅಧಿಕ ಪೌಷ್ಟಿಕಾಂಶಗಳು ಲಭ್ಯವಾಗುತ್ತವೆ ಎನ್ನತ್ತಾರೆ ತದ್ವನಂ ಕಂಪನಿ ಪ್ರೋಪ್ರಿಯೇಟರ್ ಸರೋಜ್ ಪಾಟೀಲ್.
ಕಳೆದ ನಾಲ್ಕು ವರ್ಷಗಳ ಹಿಂದೆ ತದ್ವನಂ ಎಂಬ ಕಂಪನಿ ಪ್ರಾರಂಭಿಸಿದರು. ಎನ್ ಆರ್ ಎಲ್ ಎಂ ನಲ್ಲಿ 40 ಸಾವಿರ, ನಂತರ ಪ್ರಧಾನಮಂತ್ರಿ ರೋಜಗಾರ್ ಯೋಜನೆಯಿಂದ 18 ಲಕ್ಷ ಸಾಲ ಪಡೆದು, ಗುಣಮಟ್ಟದ ಉತ್ಪನ್ನ ತಯಾರಿಕೆಗೆ ಬೇಕಾದ ಮೆಷನರಿಗಳನ್ನು ಖರೀದಿಸಿ ಗ್ರಾಮೀಣ ಮಟ್ಟದಲ್ಲಿ ಸಿಗುವ ವಸ್ತುಗಳನ್ನು ಬಳಸಿ ಹೊಸ ಮಾರ್ಕೇಟಿಂಗ್ ಲೋಕವನ್ನು ಸೃಷ್ಟಿಸಿದ್ದಾರೆ. ವರ್ಷಕ್ಕೆ 15 ಲಕ್ಷ ಆದಾಯ ಗಳಿಸುವ ತದ್ವನಂ ನಿಜಕ್ಕು ಗ್ರಾಮೀಣ ಭಾಗದಲ್ಲಿ ರೈತ ಮಹಿಳೆಯರಲ್ಲಿ ಹೊಸ ಉತ್ಸಾಹ ಹುಟ್ಟಿಸಿದೆ.
ಇದನ್ನೂ ವೀಕ್ಷಿಸಿ: ಸಾವಿರಾರು ಮಹಿಳೆಯರಿಗೆ ಮಾದರಿಯಾದ ಧಾರವಾಡ ಮಹಿಳೆ: ಪ್ರತಿ ದಿನ ಈಕೆ ಆದಾಯ 5 ಸಾವಿರ !