ವಂದೇ ಭಾರತ್‌ ರೈಲಿಗೆ ಯುವಕರಿಂದ ಕಲ್ಲು ತೂರಾಟ... ರೈಲ್ವೇ ಇಲಾಖೆಗೆ ಪ್ರಾಣ ಸಂಕಟ

ಐದಾರು ತಿಂಗಳಲ್ಲಿ ವಂದೇ ಭಾರತ್ ಒಂದಕ್ಕೆ 25 ಬಾರಿ ಕಲ್ಲೇಟು
ಒಂದು ಕಿಟಕಿ ಗಾಜಿಗೆ 25 ಸಾವಿರದಿಂದ 40 ಸಾವಿರ ರೂ. ವೆಚ್ಚ
ಬೋಗಿಗೆ ಕಲ್ಲೇಟು ಬಿದ್ದು ಡ್ಯಾಮೇಜ್ ಆದರೆ ಲಕ್ಷಾಂತರ ರೂ.ಖರ್ಚು

First Published Jul 30, 2023, 10:04 AM IST | Last Updated Jul 30, 2023, 10:04 AM IST

ಮೋದಿ ಕನಸಿನ ವಂದೇ ಭಾರತ್ ರೈಲಿಗೆ(Vande Bharat train) ಹಲವು ಕಡೆ ಕಲ್ಲುಗಳನ್ನು ಎಸೆಯಲಾಗುತ್ತಿದೆ. ರಾಮನಗರ, ಮಂಡ್ಯ ಭಾಗದಲ್ಲಿ ವಂದೇ ಭಾರತ್ ರೈಲಿಗೆ ಹೆಚ್ಚು ಕಲ್ಲುಗಳನ್ನು(stone pelting) ತೂರಲಾಗುತ್ತಿದೆ. ದಿನದಿಂದ ದಿನಕ್ಕೆ ರೈಲಿಗೆ ಕಲ್ಲೆಸೆಯುವವರ ಸಂಖ್ಯೆಯೂ ಸಹ ಹೆಚ್ಚಳವಾಗಿದೆ. ಹೀಗಾಗಿ ಕಲ್ಲು ತೂರಾಟಕ್ಕೆ ಕಡಿವಾಣ ಹಾಕಲು ರೈಲ್ವೆ ಇಲಾಖೆ(railway department) ಹರಸಾಹಸ ಪಡುತ್ತಿದೆ. ಅಧಿಕಾರಿಗಳು ಎಷ್ಟೇ ಮನವಿ ಮಾಡಿದ್ರೂ, ಕಲ್ಲು ತೂರಾಟ ಮಾತ್ರ ನಿಂತಿಲ್ಲ. ‘ವಂದೇ ಭಾರತ್ ದೇಶದ ಆಸ್ತಿ, ಅದಕ್ಕೆ ಹಾನಿ ಮಾಡಬೇಡಿ’ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮನವಿ ಮಾಡಿಕೊಂಡರೂ,  ಜನತೆ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ 200, ಬೆಂಗಳೂರಲ್ಲೇ 25 ಪ್ರಕರಣಗಳು(Bengaluru) ದಾಖಲಾಗಿವೆ. ನೈಋತ್ಯ ರೈಲ್ವೆ ಇಲಾಖೆ ಬೆಂಗಳೂರು ವಿಭಾಗದಲ್ಲಿ ವರ್ಷಕ್ಕೆ 100 ಪ್ರಕರಣಗಳು ದಾಖಲಾಗಿವೆ. 100 ಪ್ರಕರಣಗಳ ಪೈಕಿ 25ಕ್ಕೂ ಹೆಚ್ಚು ಕೇಸ್ ವಂದೇ ಭಾರತ್‌ಗೆ ಕಲ್ಲು ತೂರಿದ್ದಾಗಿವೆ. ಈಗಾಗಲೇ ರೈಲ್ವೆ ಇಲಾಖೆ ಪ್ರಕಾರ, 15 ಮಂದಿ ಬಂಧನವಾಗಿದ್ದು, 18 ವರ್ಷ ಮೇಲ್ಪಟ್ಟವರಾದರೆ 5 ರಿಂದ 10 ವರ್ಷ ಕಠಿಣ ಶಿಕ್ಷೆ ಪಕ್ಕಾ ಆಗಿದೆ.

ಇದನ್ನೂ ವೀಕ್ಷಿಸಿ:  ಗೃಹಜ್ಯೋತಿ ಯೋಜನೆ: ಜೂನ್‌.25ರ ನಂತರ ನೋಂದಣಿ ಮಾಡಿದವರಿಗೆ ಫ್ರೀ ಬಿಲ್‌ ಇಲ್ಲ..!